ಕಾಂಗ್ರೆಸ್ ನಾಯಕ ಇಕ್ಬಾಲ್ ಎಲಿಮಲೆ ಕಾರಿಗೆ ಗುದ್ದಿದ ಸ್ಕೂಟಿ : ಸವಾರನಿಗೆ ಗಾಯ

0

ಸುಳ್ಯದ ರಥಬೀದಿಯಲ್ಲಿ ಕಾಂಗ್ರೆಸ್ ಮುಖಂಡ ಇಕ್ಬಾಲ್ ಎಲಿಮಲೆಯವರ ಕಾರಿಗೆ ಸ್ಕೂಟಿ ಡಿಕ್ಕಿಯಾದ ಘಟನೆ ಇದೀಗ ವರದಿಯಾಗಿದೆ.

ರಥಬೀದಿ ರಸ್ತೆಯಲ್ಲಿ ಕಾರಿನ ಇಂಡಿಕೇಟರ್ ಹಾಕಿ ಇಕ್ಬಾಲ್ ರವರು ಕಾರನ್ನು ತಿರುಗಿಸುತ್ತಿದ್ದ ವೇಳೆ ಎದುರಿನಿಂದ ನೌಶಾದ್ ಎಂಬವರು ಬಂದ ಸ್ಕೂಟಿ ಡಿಕ್ಕಿಯಾಯಿತು. ಪರಿಣಾಮ ಸ್ಕೂಟಿಯ ಹಿಂಬದಿ ಸವಾರನ ಹಣೆಗೆ, ಕಾಲಿಗೆ ಗಾಯವಾಗಿದೆ.
ಅದೇ ವೇಳೆಗೆ ಆ ರಸ್ತೆಯಾಗಿ ಬಂದ ಅಂಬ್ಯುಲೆನ್ಸ್ ನಲ್ಲಿ ಗಾಯಾಳು ಯುವಕನನ್ನು ಇಕ್ಬಾಲ್ ರವರೇ ಕೆ.ವಿ.ಜಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.

ಇಕ್ಬಾಲ್ ಎಲಿಮಲೆ ಯವರ ಕಾರಿನ ಮುಂಭಾಗ ಜಖಂಗೊಂಡಿದೆ