ನಾಮಕರಣ : ರಿಷಿ ಅನಂತರಾಜ್

0

ಮಡಪ್ಪಾಡಿ ಗ್ರಾಮದ ಮಾಪನಮನೆ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅನಂತ ರಾಜ್ ಮತ್ತು ಶ್ರೀಮತಿ ಧನ್ಯರವರ ಪುತ್ರನ ನಾಮಕರಣ ಕಾರ್ಯಕ್ರಮ ಜು.7 ರಂದು ಸುಳ್ಯದ ಆಶಾ ಪ್ರಕಾಶ್ ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ನಡೆಯಿತು. ಮಗುವಿಗೆ ರಿಷಿ ಅನಂತರಾಜ್ ಎಂದು ಹೆಸರಿಡಲಾಯಿತು. ಬಳಿಕ ವಿಜೆ ವಿಖ್ಯಾತ್ ಬಳಗ ಮತ್ತು ಸಾರಂಗ ಕಲಾ ಕುಟೀರಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಗಮಿಸಿದ ಅತಿಥಿಗಳಿಗೆ ಮಾವಿನ ಗಿಡವನ್ನು ನೀಡಲಾಯಿತು.