ಪಿಕಪ್ ವಾಹನ ವಶಪಡಿಸಿಕೊಂಡು ಗೋವುಗಳನ್ನು ರಕ್ಷಿಸಿದ ಮಡಿಕೇರಿ ಪೊಲೀಸರು
ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಪರಾರಿಯಾಗಿ, ಓರ್ವನ ಬಂಧನವಾದ ಘಟನೆ ಪೆರಾಜೆಯಲ್ಲಿ ಜು.10ರಂದು ರಾತ್ರಿ ಸಂಭವಿಸಿದೆ.
ಪೆರಾಜೆ ಗ್ರಾಮದ ಕುಂಬಳಚೇರಿ ಕುಂದಲ್ಪಾಡಿ – ಕೂರ್ನಡ್ಕ ರಸ್ತೆಯ ಮೂಲಕ ಕೇರಳಕ್ಕೆ KA 12 8020 ಪಿಕಪ್ ವಾಹನದಲ್ಲಿ ಗೋವುಗಳನ್ನು ಮೂವರು ವ್ಯಕ್ತಿಗಳು ಸಾಗಿಸುತ್ತಿರುವ ಬಗ್ಗೆ ಹಿಂದೂ ಸಂಘಟನೆಯವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ, ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದು, ಗೋವುಗಳನ್ನು ರಕ್ಷಿಸಿದ್ದಾರೆ.
ಈ ವೇಳೆ ಪಿಕಪ್ ವಾಹನದಲ್ಲಿದ್ದ ಪೆರಾಜೆಯ ಸಚಿನ್ ಹಾಗೂ ನಿತಿನ್ ಎಂಬವರು ಓಡಿ ತಪ್ಪಿಸಿಕೊಂಡಿದ್ದು, ಪಿಕಪ್ ಚಾಲಕ ಸುಳ್ಯದ ಕೇರ್ಪಳದಲ್ಲಿ ವಾಸವಿರುವ ಕಲ್ಲಪಳ್ಳಿಯ ವಿನೋದ್ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಕೊಡಗು ಸಂಪಾಜೆ ಹಾಗೂ ಮಡಿಕೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್, ರವಿಕುಮಾರ್, ನವೀನ್ ಕುಮಾರ್, ಬಸವರಾಜ್, ಪ್ರವೀಣ್ ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.