ಹಾಲೆಮಜಲು: ರಸ್ತೆಗೆ ಮರಬಿದ್ದು ಹಾನಿ

0

ನಾಲ್ಕೂರು ಗ್ರಾಮದ ಹಾಲೆಮಜಲು- ಪಂಜಿಪಳ್ಳ ರಸ್ತೆಯ ಅಂಗನವಾಡಿಯ ಹಿಂಬದಿ ‌ಕಿಲಾರ್ಭೋಗಿ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ.


ಕಳೆದ ಕೆಲವು ಸಮಯಗಳಿಂದ ಮರ ವಾಲಿಕೊಂಡಿದ್ದು ನಿನ್ನೆ ರಸ್ತೆಗೆ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಪಂಜಿಪಳ್ಳ ಹಾಗೂ ಆ ಕಡೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಅಂಗನವಾಡಿಗೆ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.