ನಿರಂತರ ಜಾಗೃತಿ ಕಾರ್ಯಕ್ಕೆ ಶಾಸಕರ ಸೂಚನೆ
ಡೆಂಗ್ಯೂ ಹರಡದಂತೆ ಜಾಗೃತಿ ಮೂಡಿಸುವ ಕಾರ್ಯ ಆರೋಗ್ಯ ಇಲಾಖೆಯಿಂದ ಸುಳ್ಯದಲ್ಲಿ ನಡೆಯುತ್ತಿದೆ. ತಾ.ಪಂ., ನ.ಪಂ. ಹಾಗೂ ಇತರ ಇಲಾಖೆಗಳು ಸಹಯೋಗ ನೀಡಿದೆ. ಜಾಗೃತಿ ಕಾರ್ಯಕ್ಕೆ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಜು.11ರಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು ಡೆಂಗ್ಯೂ ಕುರಿತು ಜಾಗೃತಿ ಕಾರ್ಯ ನಿರಂತರವಾಗಿರಲಿ ಎಂದು ಹೇಳಿದರು.
ಬಳಿಕ ತಾಲೂಕು ಪಂಚಾಯತ್, ಪಕ್ಕದ ಸಮಾಜಕಲ್ಯಾಣ ಇಲಾಖಾ ಹಾಸ್ಟೆಲ್, ವಾಣಿಜ್ಯ ಸಂಕೀರ್ಣಗಳಿಗೆ ತೆರಳಿ ಜಾಗೃತಿ ಮೂಡಿಸಲಾಯಿತು. ನೀರು ನಿಲ್ಲದಂತೆ ಸೂಚನೆ ನೀಡಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಡೆಂಗ್ಯೂ ಕುರಿತಾಗಿ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಸುಳ್ಯ ತಾ.ಪಂ. ಇ.ಒ. ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಬಿಸಿಎಂ ಅಧಿಕಾರಿ ಗೀತಾ ಹಾಗೂ ವಿವಿಧ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಇದ್ದರು.