ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಸಾರ್ವಜನಿಕರಿಗೆ ಹಣ್ಣು ಮತ್ತು ಹೂವಿನ ಗಿಡಗಳ ವಿತರಣಾ ಸಮಾರಂಭ ಜು.17 ರಂದು ಒಕ್ಕೂಟದ ಕಚೇರಿಯಲ್ಲಿ ನಡೆಯಿತು.
ಎಕ್ಸಲೆಂಟ್ ಕೋಚಿಂಗ್ ಸೆಂಟರ್ ನ ಪ್ರಿನ್ಸಿಪಾಲ್ ದಯಾನಂದ ಉಚ್ಚಿಲ್ ರವರು ಗಿಡವನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಆಗಮಿಸಿದ ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ, ಒಕ್ಕೂಟದ ಕಟ್ಟಡದಲ್ಲಿರುವ ಗುರು ಶಾಮಿಯಾನ ಮಾಲಕರಾದ ಜಿ.ಜಿ. ನಾಯಕ್, ಸೋನಿಕ್ ಸಿಲಿಕೋನ್ ಸಿಸ್ಟಂ ಮಾಲಕರಾದ ರವಿ ಭಟ್ ಎಲಿಕ್ಕಳ, ಶ್ರೀಮತಿ ಸುಮಾ ಕುಡ್ವ ಪಂಜ, ಶ್ರೀಮತಿ ಜಯಲಕ್ಷ್ಮಿ ದಯಾನಂದ ಇವರುಗಳು ಗಿಡಗಳನ್ನು ವಿತರಿಸಿ ಶುಭ ಹಾರೈಸಿದರು.
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಶೆಟ್ಟಿ ಬೊಳ್ಳೂರು ರವರು ಎಲ್ಲರನ್ನು ಸ್ವಾಗತಿಸಿ ಗಿಡಗಳನ್ನು ವಿತರಿಸುವ ಕಾರ್ಯವನ್ನು ನಡೆಸಿಕೊಟ್ಟರು. ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ. ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ, ಖಜಾಂಜಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ, ನಿರ್ದೇಶಕರಾದ ಶ್ರೀಮತಿ ಪುಷ್ಪಾ ಮಾಣಿಬೆಟ್ಟು,ಶ್ರೀಮತಿ ಶಿಲ್ಪ ಸುದೇವ್, ಶ್ರೀಮತಿ ಲಲಿತ ಶಾಂತಿನಗರ, ಶ್ರೀಮತಿ ಯಶೋದಾ ಕುಡೆಕಲ್ಲು, ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ ಗಿಡಗಳನ್ನು ವಿತರಿಸಿ ಗಿಡಗಳ ಮಹತ್ವವನ್ನು ಅರಿತು ಉಳಿಸಿ ಬೆಳೆಸಬೇಕೆಂಬ ಮಾಹಿತಿಯನ್ನು ಒಕ್ಕೂಟದ ಪರವಾಗಿ ನೀಡಿದರು. ವಿತರಣೆಗೆ ಗಿಡಗಳನ್ನು ಒದಗಿಸಿಕೊಟ್ಟ ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ರಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಶ್ರೀಮತಿ ಅನಿತಾ ಸುತ್ತುಕೋಟೆ ವಂದಿಸಿದರು. ಗುರುನಾಥ್ ಪೈಚಾರ್ ಸಹಕರಿಸಿದರು.