ಸ್ವರ್ಣಶ್ರೀ ಸ್ವ ಸಹಾಯ ಸಂಘಗಳ ಉದ್ಘಾಟನೆ
ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ.ಇದರ ಪ್ರಥಮ ಹಂತದ ವಾರ್ಷಿಕ ಮಹಾಸಭೆಯು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಸಭಾಭವನ ವಿಷ್ಣು ಸರ್ಕಲ್ ಬಳಿ ಜು.21 ರಂದು ಜರುಗಿತು.
ಸಂಘದ ಅಧ್ಯಕ್ಷ
ಜನಾರ್ಧನ ದೋಳ ರವರು ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿದರು.
ವೇದಿಕೆಯಲ್ಲಿ
ಉಪಾಧ್ಯಕ್ಷ ಸತ್ಯ ನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ರಾಘವ ಗೌಡ ಮದುವೆಗದ್ದೆ,
ಸತೀಶ್ ಕೆ.ಜಿ, ಪ್ರಕಾಶ್ ಕೇರ್ಪಳ, ಸಚಿನ್ ಕುಮಾರ್ ಬಳ್ಳಡ್ಕ, ಮಹೇಶ್ ಮೇರ್ಕಜೆ, ದೀಕ್ಷಿತ್ ಕುಮಾರ್ ಪಾನತ್ತಿಲ, ಶ್ರೀಮತಿ ಭವಾನಿ ಬಿಳಿಮಲೆ, ಶ್ರೀಮತಿ ಹರ್ಷಿತ ಕುದ್ಪಾಜೆ, ವೃತ್ತಿಪರ ನಿರ್ದೇಶಕ ಆನಂದ ಗೌಡ ಖಂಡಿಗ, ಡಾ.ಪುರುಷೋತ್ತಮ ಕಟ್ಟೆಮನೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ಉಪಸ್ಥಿತರಿದ್ದರು.
ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಶ್ರೀಮತಿ ಯಶೋಧ ಪೇರಡ್ಕ ಪ್ರಾರ್ಥಿಸಿದರು.
ಪ್ರಕಾಶ್ ಕೇರ್ಪಳ ಮಹಾಸಭೆಯ ನೋಟಿಸ್ ವಾಚಿಸಿ ದಾಖಲಿಸಿದರು.
ಸಂಘದ ಅಧ್ಯಕ್ಷ ಜನಾರ್ಧನ ದೋಳ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಸತ್ಯ ನಾರಾಯಣ ಅಚ್ರಪ್ಪಾಡಿ 2024-25 ನೇ ಸಾಲಿಗೆ ತಯಾರಿಸಿದ ಮುಂಗಡ ಪತ್ರವನ್ನು ಮಂಡಿಸಿದರು. ಸಿ.ಇ.ಒ ಅಶ್ವಥ್ ಬಿಳಿಮಲೆ 2023-24 ನೇ ಸಾಲಿನ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಸ್ವರ್ಣಶ್ರೀ ಸ್ವ ಸಹಾಯ ಸಂಘಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.
ನಿರ್ದೇಶಕ ದೀಕ್ಷಿತ್ ಕುಮಾರ್ ಪಾನತ್ತಿಲ ಲೆಕ್ಕ ಪರಿಶೋಧಕರ ಆಯ್ಕೆ ಬಗ್ಗೆ ವಿವರ ನೀಡಿದರು. ವೃತ್ತಿಪರನಿರ್ದೇಶಕ ಆನಂದ ಖಂಡಿಗ ಮತ್ತು ಮಹೇಶ್ ಮೇರ್ಕಜೆ ಸಂಘದ ಬೆಳವಣಿಗೆಯ ಕುರಿತು ವಿಷಯ ಪ್ರಸ್ತಾಪಿಸಿದರು.
ಸತೀಶ್ ಕೆ.ಜಿ. ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಸದಸ್ಯರ ಪೈಕಿ ಐದು ಮಂದಿಯನ್ನು ಅದೃಷ್ಟ ಚೀಟಿಯ ಮೂಲಕ ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.