ಜಾಲ್ಸೂರು ಗ್ರಾಮದ ಕಾಟೂರು ನಿವಾಸಿ ನಿವೃತ್ತ ಅಧ್ಯಾಪಕ ನಾರಾಯಣ ಮಾಸ್ತರ್ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜು. 22ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ನಾರಾಯಣ ಮಾಸ್ತರ್ ಅವರು ಶಿಕ್ಷಕರಾಗಿ ಜಾಲ್ಸೂರಿನ ಕದಿಕಡ್ಕ ಸ.ಹಿ.ಪ್ರಾ.ಶಾಲೆ, ಅಡ್ಕಾರಿನ ಜಾಲ್ಸೂರು ಸ.ಹಿ.ಪ್ರಾ. ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು.
ಮೃತರು ಪತ್ನಿ ಪುಷ್ಪಲತಾ, ಪುತ್ರ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಬಾಲಪ್ರದೀಪ, ಪುತ್ರಿಯರಾದ ಶ್ರೀಮತಿ ಯಶೋಲತಾ, ಶ್ರೀಮತಿ ನಮಿತಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.