ಬಿಎಂಎಸ್ ಆಟೋ ನಿಲ್ದಾಣದ ಬಳಿ ವಿದ್ಯುತ್ ತಂತಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯ

0

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ವಿದ್ಯುತ್ ಲೈನಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯ ಜು.21ರಂದು ನಡೆಯಿತು.

ಬಿಎಮ್ಎಸ್ ಆಟೋ ನಿಲ್ದಾಣದಲ್ಲಿ ನೆರಳಿಗಾಗಿ ನೆಟ್ಟಿದ್ದ ಮರದ ಗೆಲ್ಲುಗಳು ಪಕ್ಕದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ಲೈನಿಗೆ ತಾಗುತ್ತಿದ್ದು ಮುನ್ನೆಚ್ಚರಿಕ ಕ್ರಮವಾಗಿ ಬಿ ಎಮ್ ಎಸ್ ಆಟೋ ನಿಲ್ದಾಣದ ಚಾಲಕರು ಮತ್ತು ಮೆಸ್ಕಾಂ ಸಿಬ್ಬಂದಿಗಳ ಸಹಕಾರದೊಂದಿಗೆ ಗೆಲ್ಲುಗಳ ತೆರವು ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಸಹಕಾರ ನೀಡಿದರು.