ಗಾಂಧಿನಗರ :ಕೆ.ಪಿ.ಎಸ್ ಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಕ್ರೀಡಾ ಸಾಮಗ್ರಿಗಳ ಕೊಡುಗೆ

0

ಬ್ಯಾಂಕ್ ಆಫ್ ಬರೋಡ ಇದರ 117 ನೇ ಸ್ಥಾಪನ ದಿನಾಚರಣೆ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಸುಮಾರು 13 ಸಾವಿರ ರೂ ಗಳ ಕ್ರೀಡಾ ಸಾಮಗ್ರಿ ಗಳನ್ನು ಜು 24 ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ವಿಜಯ್ ಮತ್ತು ಸಿಬ್ಬಂದಿ ವರ್ಗದವರು,ಶಾಲಾ ಕಾರ್ಯಧ್ಯಕ್ಷ ಚಿದಾನಂದ ಕುದ್ಪಾಜೆ, ಸದಸ್ಯರಾದ ರಾಮ್ ಮುರಳಿ,ಶಾಲೆಯ ಮುಖ್ಯೋಪಾಧ್ಯಾಯ ಪದ್ಮನಾಭ ಅತ್ಯಾಡಿ ಮತ್ತು ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.