ನಾಲ್ಕೂರು: ಎರಡು ದಿನಗಳ ಹಿಂದೆ ಬಿದ್ದಿದ್ದ ವಿದ್ಯುತ್ ಲೈನ್

0

ಕೆಲಸ ಮಾಡುವವರ ಮೇಲೆ ವಿದ್ಯುತ್ ಪ್ರವಹಿಸಿ ಇಬ್ಬರಿಗೆ ಗಾಯ

ನಾಲ್ಕೂರು ಗ್ರಾಮದ ಕಾಯರ್ ಮುಗೆರ್ ಎಂಬಲ್ಲಿ ಎರಡು ದಿನಗಳ ಹಿಂದೆ ಗಾಳಿ ಮಳೆಗೆ ಬಿದ್ದ ವಿದ್ಯುತ್ ಲೈನ್ ಹತ್ತಿರ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಇಬ್ಬರಿಗೆ ಗಾಯವಾದ ಘಟನೆ ಇಂದು ವರದಿಯಾಗಿದೆ.

ಸುಂದರ ಕಾಯರ್ ಮುಗೇರ್ ಅವರು ತಮ್ಮ ಜಾಗದೊಳಗಿನ ಮರ ಕಡಿಯುವಾಗ ಲೈನ್ ಮೆನ್ ಗಳು ವಿದ್ಯುತ್ ಚಾರ್ಜ್ ಮಾಡಿದ್ದಾರೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸುಂದರ ಅವರಿಗೆ ಶಾಕ್ ಹೊಡೆದು ಬೊಬ್ಬೆ ಹೊಡೆದಿದ್ದಾರೆ. ಇದನ್ನು ಕೇಳಿ ಸ್ಥಳೀಯ ಮನೆಯವರಾದ ಯೋಗೀಶ್ ಅವರ ಪತ್ನಿ ರಮ್ಯ ಓಡಿ ಬಂದಿದ್ದಾರೆ. ಆ ವೇಳೆ ವಿದ್ಯುತ್ ಲೈನ್ ತುಳಿದು ರಮ್ಯ ಅವರೂ ಶಾಕ್ ಗೊಳಗಾಗಿದ್ದಾರೆ. ತಕ್ಷಣ ಯೋಗೀಶ್ ಅವರು ಬಂದು ವಿದ್ಯುತ್ ಶಾಕ್ ನಿಂದ ಬಿಡಿಸಿದ್ದಾರೆ.

ಸುಂದರ ಅವರ ಕೈಯಲ್ಲಿ ಗುಳ್ಳೆ ಬಂದಿರುವುದಾಗಿ ತಿಳಿದು ಬಂದಿದೆ. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ.