ಕೆ.ವಿ.ಜಿ. ತಾ೦ತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ಸಂಶೋಧನಾ ವಿದ್ಯಾರ್ಥಿ ವಿಕ್ರಂ ಕೆ.ವಿ. ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಪ್ರೊಫೆಸರ್ ಡಾ. ಉಮಾಶಂಕರ್ ಕೆ.ಎಸ್. ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಇವರ ಮಾರ್ಗದರ್ಶನದಲ್ಲಿ ?“Study on Optimization of Machining Parameters in Micro-Turning Process Using Math Modelling and Experimentation”ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಇವರು ದಿ. ಕೆದಂಬಾಡಿ ಶ್ರೀ ವಾಸು ಮತ್ತು ಶ್ರೀಮತಿ ಪವಿತ್ರಾಕ್ಷಿ ದಂಪತಿಗಳ ಪುತ್ರ. ಇವರು ಪ್ರಸ್ತುತ ಬೆಂಗಳೂರಿನ ಎನ್.ಎಮ್.ಐ.ಟಿ.ಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. Ph.D. Final Viva-voce ನಲ್ಲಿ ಪರೀಕ್ಷಕರಾಗಿಡಾ. ಸುಭಾಸ್ಚಂದ್ರ ಕಟ್ಟೀಮನಿ, ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎನ್.ಐ.ಟಿ.ಕೆ., ಸುರತ್ಕಲ್ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲ ಡಾ. ಸುರೇಶ ವಿ.,ಡಾ. ಸವಿತಾ ಸಿ.ಕೆ., ಡೀನ್ ರೀಸರ್ಚ್ ಮತ್ತು ವಿಭಾಗ ಮುಖ್ಯಸ್ಥರು CS&E(AI&ML) ಹಾಗೂ ಡಾ. ಪ್ರವೀಣ ಎಸ್.ಡಿ., ಫಿಸಿಕ್ಸ್ ವಿಭಾಗ ಮುಖ್ಯಸ್ಥರು, ಡೀನ್ ಎಕ್ಸಾಮಿನೇಶನ್ ಉಪಸ್ಥಿತರಿದ್ದರು. ಇವರನ್ನು ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ಬಿ ಎ.ಒ.ಎಲ್.ಇ.(ರಿ), ಸುಳ್ಯ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ &ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ರೀಸರ್ಚ್ ಡಾ. ಸವಿತಾ ಸಿ.ಕೆ., ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿರುತ್ತಾರೆ.