ಪಿಕ್ಕಾಸನ್ನು ಕಚೇರಿಯೊಳಗೇ ಬಿಟ್ಟು ಹೋದರು…!
ಬೆಳ್ಳಾರೆ ಗ್ರಾಮದ ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜು. 26ರಂದು ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.
ಶಾಲೆಯ ಶಿಕ್ಷಕರ ಕಚೇರಿ ರೂಂನ ಬಾಗಿಲನ್ನು ಪಿಕ್ಕಾಸಿನಿಂದ ಮೀಟಿ ಒಳನುಗ್ಗಿದ ಕಳ್ಳರು ಕಚೇರಿಯೊಳಗಿರುವ ಕಪಾಟನ್ನು ಒಡೆದಿರುವುದಾಗಿ ತಿಳಿದುಬಂದಿದೆ. ಪೊಲೀಸರು ಇನ್ನಷ್ಟೇ ಸ್ಥಳಕ್ಕೆ ಬರಬೇಕಾಗಿದೆ.
ಬಾಗಿಲನ್ನು ಒಡೆದಿರುವ ಪಿಕ್ಕಾಸನ್ನು ಕಳ್ಳರು ಕಜೇರಿಯೊಳಗೆ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.