ನೆಟ್ಟಾರು ಶಾಲಾ ಬೀಗ ಒಡೆದು ಒಳನುಗ್ಗಿದ ಕಳ್ಳರು

0

ಸ್ಥಳಕ್ಕೆ ಭೇಟಿ ನೀಡಿದ ಬೆಳ್ಳಾರೆ ಪೊಲೀಸರು – ಪರಿಶೀಲನೆ

ನೆಟ್ಟಾರು ಸ.ಹಿ.ಪ್ರಾ.ಶಾಲೆಯಲ್ಲಿ ಬೀಗ ಒಡೆದು ಕಳ್ಳರು ಒಳನುಗ್ಗಿದ ಘಟನೆ ಜು.26 ರಂದು ರಾತ್ರಿ ನಡೆದಿದೆ.
ಪಿಕ್ಕಾಸಿನ ಸಹಾಯದಿಂದ ಎದುರಿನ ಬೀಗವನ್ನು ಮೀಟಿ ತೆಗೆದಿದ್ದು ಬಳಿಕ ಒಳಗೆ ನುಗ್ಗಿ ಕಚೇರಿಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ.
ಆದರೆ ಯಾವುದೇ ಸೊತ್ತನ್ನು ಕಳವು ಮಾಡದೇ ಪಿಕ್ಕಾಸನ್ನು ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.


ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ.