ತಾಲೂಕು ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ತಡೆಯಿರಿ

0

ಸುಳ್ಯ ತಾಲೂಕು ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ವಿಪರೀತ ವಾಗಿದ್ದು ಇದಕ್ಕೆ ಸುಳ್ಯದ ಶಾಸಕರು ಕಡಿವಾಣ ಹಾಕಬೇಕು ಎಂದು ಮಧುಸೂದನ್ ಎಂಬವರು ಮನವಿ ಮಾಡಿಕೊಂಡಿದ್ದಾರೆ.

ನಾವು ಒಂದು ಕೆಲಸಕ್ಕೆ ಬಂದರೆ ನಮ್ಮನ್ನು ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸತಾಯಿಸುತ್ತಾರೆ. ಆದರೆ ಬ್ರೋಕರ್ ಗಳು ನೇರವಾಗಿ ಒಳಗೆ ಹೋಗಿ ಕೆಲಸ ಮಾಡಿಕೊಂಡು ಹೋಗುತ್ತಾರೆ. ಇದನ್ನು ಶಾಸಕರು ತಡೆಯಬೇಕು. ಜನಸಾಮಾನ್ಯರ ಕೆಲಸ ಶೀಘ್ರ ಆಗುವಂತೆ ಆಗಬೇಕು ಎಂದು ಮಧುಸೂದನ್ ಎಂಬವರು ಸುದ್ದಿಯ ಮೂಲಕ ಶಾಸಕರನ್ನು ಮನವಿ ಮಾಡಿದ್ದಾರೆ.