ಯೋಗಾಸನದಲ್ಲಿ 4ನೇ ವಿಶ್ವ ದಾಖಲೆ ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ

0

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಯೋಗಮುದ್ರಾಸನ ದಲ್ಲಿ 41 ನಿಮಿಷ 02 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಆ. 4 ರಂದು ಮೈಸೂರುನಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 11 ರಿಂದ 14 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ನಿಹಾನಿ ವಾಲ್ತಾಜೆ 06 ಸ್ಥಾನಗಳಿಸಿರುತ್ತಾರೆ.

ಇವರು ವಾಲ್ತಾಜೆ ಪ್ರಶಾಂತ್ ವಾಲ್ತಾಜೆ ಮತ್ತು ಶ್ರೀಮತಿ ಚೈತ್ರ ರವರ ಪುತ್ರಿ. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.

ಪ್ರಸ್ತುತ ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ನ 5ನೇ ತರಗತಿ ವಿದ್ಯಾರ್ಥಿನಿ.