ನಾಟಿ ವೈದ್ಯೆ ಬಾಲಕ್ಕ ಕೊರಪ್ಪಣೆಯವರಿಗೆ ಸನ್ಮಾನ
ಪಂಜ ಲಯನ್ಸ್ ಕ್ಲಬ್ ವತಿಯಿಂದ ಆ.4ರಂದು ಆಟಿ ಉತ್ಸವ ಪಂಜ ಲಯನ್ಸ್ ಭವನದಲ್ಲಿ ಜರುಗಿತು.
ಲಯನ್ಸ್ ಜಿಲ್ಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಪೂಜಾರಿ ಮೇಲ್ಕಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.
ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಆಟಿ ತಿಂಗಳ ವಿಶೇಷತೆ ಕುರಿತು ಪ್ರಧಾನ ಭಾಷಣ ಮಾಡಿದರು . ಆಟಿ ಆಚರಣೆ ಕೇವಲ ಖಾದ್ಯಗಳ ಪ್ರದರ್ಶನಕ್ಕೆ ಸೀಮಿತವಾಗದೆ ಸಂಪ್ರದಾಯದ ಅರಿವಿನ ಆಚರಣೆಗಳಾಗಬೇಕು. ಆ ಮೂಲಕ ನಾಡಿನ ಜನಪದೀಯ, ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು ಎಂದವರು ಹೇಳಿದರು.
ಜನಪ್ರಿಯ ನಾಟಿ ವೈದ್ಯ ಶ್ರೀಮತಿ ಬಾಲಕ್ಕ ಕೊರಪ್ಪಣೆ ರವರನ್ನು ಸನ್ಮಾನಿಸಲಾಯಿತು. ಕ್ಲಬ್ ನ ನಿಕಟಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ, ಕಾರ್ಯಕ್ರಮ ಸಂಯೋಜಕ ಕೇಶವ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ವಕೀಲರ ಸಂಘದ ಉಪಾಧ್ಯಕ್ಷರಾಗಿ ಚುನಾಯಿತರಾದ ದಿಲೀಪ್ ಬಾಬ್ಲುಬೆಟ್ಟು ರವರನ್ನು ಸನ್ಮಾನಿಸಲಾಯಿತು. ಕ್ಲಬ್ ನ ವತಿಯಿಂದ ಕರಿಂಬಿಲ ವಸಂತ ರತ್ನ ಸಂಸ್ಥೆಗೆ ಅನ್ನಭಾಗ್ಯ ಕಾರ್ಯಕ್ರಮದಡಿ ಅಕ್ಕಿ ವಿತರಣೆ ತುಕಾರಾಮ ಏನೆಕಲ್ಲು ರವರ ಪ್ರಾಯೋಜಕತ್ವದಲ್ಲಿ ನಡೆಯಿತು. ವಸಂತ ರತ್ನ ಸಂಸ್ಥೆಗೆ ಪುರಂದರ ಪನ್ಯಾಡಿ ರವರು ದೇಣಿಗೆ ನೀಡಿದರು.ಲಯನ್ಸ್ ಭವನಕ್ಕೆ ಸೀತಾರಾಮ ಕುದ್ವ ರವರು ಗಡಿಯಾರ ಕೊಡುಗೆಯಾಗಿ ನೀಡಿದರು . ಲಯನ್ಸ್ ಭವನ ನಿರ್ಮಾಣ ಟ್ರಸ್ಟ್ ನ ಅಧ್ಯಕ್ಷ ಮಾಧವ ಗೌಡ ಜಾಕೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆಟಿ ತಿಂಗಳ ಖಾದ್ಯಗಳ ಪ್ರದರ್ಶನ ಮತ್ತು ಸಹಭೋಜನ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ತಾರಾ ಕೂಟಾಜೆ ಪ್ರಾರ್ಥಿಸಿದರು. ಶ್ರೀಮತಿ ಲೀಲಾ ಜಾಕೆ ಧ್ವಜ ವಂದನೆ ಮಾಡಿದರು ಕೇಶವ ಕುದ್ವ ಪ್ರಾಸ್ತಾವಿಕಗೈದು ಸ್ವಾಗತಿಸಿದರು. ವಾಸುದೇವ ಮೇಲ್ಪಾಡಿ ಮತ್ತು ಪುರಂದರ ಪನ್ಯಾಡಿ ಅತಿಥಿಗಳ ಪರಿಚಯಿಸಿದರು. ಮೋಹನ್ ದಾಸ್ ಕೂಟಾಜೆ ವಂದಿಸಿದರು.