ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಗ್ರಾಮೋತ್ಸವ – ಜನ್ಮದೀನೋತ್ಸವ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕು ಗುತ್ತಿಗಾರು ವಲಯ ಇದರ ನೇತೃತ್ವದಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಮತ್ತು ಅರೋಗ್ಯ ರಕ್ಷಾ ಸಮಿತಿ ಗುತ್ತಿಗಾರು ಇವರ ಸಹಯೋಗದೊಂದಿಗೆ ಗ್ರಾಮೋತ್ಸವ ಪ್ರಯುಕ್ತ ಉಚಿತ ಅರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರಿನಲ್ಲಿ ನಡೆಯಿತು.
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಬಿ. ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗುತ್ತಿಗಾರು ವಲಯದ ಅಧ್ಯಕ್ಷರ ಜಯರಾಮ ಪೈಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ವಿಕಾಸ ಯೋಜನೆಯ ಪಿ. ಆರ್. ಓ ಮಾತೇಶ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಉದ್ದೇಶದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ, ಸುಳ್ಯ ತಾಲೂಕು ಘಟ ಸಮಿತಿಯ ಅಧ್ಯಕ್ಷಸುಹಾಸ್ ಅಲೆಕ್ಕಾಡಿ, ಗುತ್ತಿಗಾರು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಆಡಳಿತ ಮೊಕ್ತೆಸರರಾದ ವೆಂಕಟ್ ವಳಲಂಬೆ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಎ. ಜೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಅಂಕೂರ್, ಕ್ಯಾನ್ಸರ್ ವಿಕಿರಣ ತಜ್ಞ ಡಾ. ಪುನೀತ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾರ್ತಿಕ್ ಬಿ.,ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ, ವಲಯ ಸಂಯೋಜಕಿ, ಗುತ್ತಿಗಾರು ಗ್ರಾಮದ ಸೇವಾದೀಕ್ಷಿತೆ ಶ್ರೀಮತಿ ಭಾವನಾ, ಕೊಲ್ಲಮೊಗರು ಗ್ರಾಮದ ಸೇವಾದೀಕ್ಷಿತೆ ಶ್ರೀಮತಿ ತ್ರಿವೇಣಿ,ಮಡಪ್ಪಾಡಿ ಗ್ರಾಮದ ಕವಿತಾ, ದೇವಚಳ್ಳ ಸೇವಾದೀಕ್ಷಿತೆ ಯಶೋಧ, ಮೊಗ್ರದ ಸೇವಾದೀಕ್ಷಿತೆ ಪೂರ್ಣಿಮಾ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಗುತ್ತಿಗಾರು ವಲಯದ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಲಯ ಸಂಯೋಜಕಿ ಸವಿತಾ ಸ್ವಾಗತಿಸಿ, ಮಡಪ್ಪಾಡಿ ಸೇವಾದೀಕ್ಷಿತೆ ಕವಿತಾ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.100 ಕ್ಕೂ ಅಧಿಕ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.