ಆ.11 ರಂದು ಸುಳ್ಯದಲ್ಲಿ ಶೈಕ್ಷಣಿಕ ಮಾಹಿತಿ ಮತ್ತು ತರಬೇತಿ ಕೇಂದ್ರ nLight ಎಜುಕೇಷನಲ್ ಸರ್ವಿಸಸ್ ಸೆಂಟರ್ ಪ್ರಾರಂಭ

0

ಸುಳ್ಯದ ಶಿಕ್ಷಣ ಪ್ರೇಮಿಗಳ ಬಹು ವರ್ಷಗಳ ಅಭಿಲಾಷೆಗಳಲ್ಲಿ ಒಂದಾದ ಪೋಷಕರು ಹಾಗು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾಹಿತಿ ನೀಡುವ ಕೇಂದ್ರ ಆಗಸ್ಟ್ 11ರಂದು ಲೋಕಾರ್ಪಣೆಗೊಳ್ಳಲಿದೆ.

ಕೆಲವು ಸಮಾನ ಮನಸ್ಕ ವೃತ್ತಿಪರ ಯುವಕರ ತಂಡ ಕಳೆದ 4 ವರ್ಷದಿಂದ ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗೃತಿಗೊಳಿಸುವ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನಿಡುವ ಸಂಸ್ಥೆ nLight ಎಜುಕೇಷನಲ್ ಸರ್ವಿಸಸ್ ನ ಕಚೇರಿಯ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಾಗಾರ ಸುಳ್ಯ ಗಾಂಧಿನಗರದ ಪಿ.ಎ ಆರ್ಕೆಡ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಮುಖ ಸದಾತುಗಳು, ಉಲೇಮಾಗಳು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ನಾಯಕರು ಹಾಗು ಶಿಕ್ಷಣ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭೆಗಳಿಗೆ ಪುರಸ್ಕಾರ, ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ, ಸಂವಾದ ನಡೆಯಲಿದೆ.