ಕು. ಲಾಸ್ಯ ವಸಂತ್ ಬೆಂಗಳೂರು ದೂರದರ್ಶನ ಕೇಂದ್ರದ ” ಬಿ ಗ್ರೇಡ್ ” ಭರತನಾಟ್ಯ ಕಲಾವಿದೆಯಾಗಿ ಆಯ್ಕೆ

0

ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಭರತನಾಟ್ಯದಲ್ಲಿ ” ಬಿ ಗ್ರೇಡ್ ” ಕಲಾವಿದೆಯಾಗಿ ಕು. ಲಾಸ್ಯ ವಸಂತ್ ಆಯ್ಕೆ ಆಗಿದ್ದಾರೆ.

ಇತ್ತೀಚೆಗೆ ಅಮೇರಿಕಾದ ನ್ಯೂಜೆರ್ಸಿ ಯಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಮೆಚ್ಚುಗೆಯ ಪ್ರಶಸ್ತಿಪತ್ರ ಪಡೆದಿದ್ದರು.

ಬಾಲ್ಯದಲ್ಲಿ ಭರತನಾಟ್ಯವನ್ನು ತನ್ನ ತಾಯಿಯಿಂದ ಅಭ್ಯಸಿಸಿದ ಇವರು, ಈಗ ಭರತನಾಟ್ಯ ಕಲಾವಿದೆ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರವರ ಶಿಷ್ಯೆ.

ಈಗಾಗಲೇ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀ ರ್ಣರಾಗಿರುವ ಇವರು ವಿದ್ವತ್ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾರೆ.

ಕೆ ವಿ ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಸುಳ್ಯ, ಬಿ ಜಿ ಎಸ್ ಪಬ್ಲಿಕ್ ಶಾಲೆ ಬೆಂಗಳೂರು, ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ವ್ಯಾಸಂಗ ಮಾಡಿದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ.

ಭರತನಾಟ್ಯ ಕಲಾವಿದೆ, ದಂತ ವೈದ್ಯೆ ಡಾ. ಸುಶ್ಮ ಮತ್ತು ಸಾಫ್ಟ್ ವೇರ್ ಇಂಜಿನಿಯರ್ ವಸಂತ್ ಕುಮಾರ್ ರವರ ಪುತ್ರಿ.

ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಿ. ಡಾ.ಕೆ.ಲಿಂಗಯ್ಯ ಮತ್ತು ದಿ. ಮಾದಮ್ಮನವರ ಹಾಗೂ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಗೌಡ ಮತ್ತು ಸುಳ್ಯದ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಕಮಲಾ ಬಾಲಚಂದ್ರರವರ ಮೊಮ್ಮಗಳು.