ಎಸ್ ಡಿ ಪಿ ಐ ಬೆಳ್ಳಾರೆ ಬ್ಲಾಕ್ ಪ್ರತಿನಿಧಿ ಸಭೆ

0

ಅಧ್ಯಕ್ಷರಾಗಿ ರಫೀಕ್ ಎಂ.ಎ,ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕಾರ್ಯದರ್ಶಿಯಾಗಿ ಹಮೀದ್ ಮರಕ್ಕಡ ಆಯ್ಕೆ

ಎಸ್ ಡಿ ಪಿ ಐ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಬ್ಲಾಕ್ ಪ್ರತಿನಿಧಿ ಸಭೆ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಬೆಳ್ಳಾರೆ ಬ್ಲಾಕ್ 2024-27 ನೇಯ ಸಾಲಿಗೆ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ
ಅಧ್ಯಕ್ಷರಾಗಿ ರಫೀಕ್ ಎಂ ಎ ಕಾರ್ಯದರ್ಶಿಯಾಗಿ ಹಮೀದ್ ಮರಕ್ಕಡ, ಕೋಶಾಧಿಕಾರಿಯಾಗಿ, ಇರ್ಷಾದ್ ಸರ್ವೆ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಅಯ್ಯನಕಟ್ಟೆ,ಸಮಿತಿ ಸದಸ್ಯರಾಗಿ ಮೊಯ್ದೀನ್ ಬೆಳ್ಳಾರೆ ಹಾಗೂ ಯೂಸಫ್ ಹಾಜಿ ಬೇರಿಕೆ ಯವರು ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯ ಆರ್. ಓ ಆಗಿ,ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ ಸಹಾಯಕರಾಗಿ, ಮಿಸ್ಬಾಹ್ ಅಡ್ಕಾರ್, ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ
ಶರೀಫ್ ನಿಂತಿಕಲ್,ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು. ಉಪಸ್ಥಿತರಿದ್ದರು.

ಸಿದ್ದೀಕ್ ಸವಣೂರು ಸ್ವಾಗತಿಸಿ ಶರೀಫ್ ನಿಂತಿಕಲ್ಲು ವಂದಿಸಿದರು.