ಇಂಟರ್ ಗ್ರೂಫ್ ತಲ್ ಸೇನಾ ಕ್ಯಾಂಪ್ ತೃಪ್ತಿ ಗೂನಡ್ಕ ಅತ್ಯುತ್ತಮ ಸಾಧನೆ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಎನ್.ಸಿ.ಸಿ. 19 ಕರ್ನಾಟಕ ಬಟಾಲಿಯನ್ ಕೆಡೆಟ್ ತೃಪ್ತಿ ಪಿ. ಗೂನಡ್ಕ ಅವರು ಇಂಟರ್ ಗ್ರೂಪ್ ತಲ್ ಸೇನಾ ಕ್ಯಾಂಪ್ (ಟಿಎಸ್ ಸಿ)ನ ಫೈಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.

ಕಾರ್ಕಳದ ಜ್ಞಾನಸುಧಾ ಪಿ.ಯು. ಕಾಲೇಜಿನಲ್ಲಿ ನಡೆದ ಟಿ.ಎಸ್. ಸಿ. 1, ಶಿವಮೊಗ್ಗದ ಸಹ್ಯಾದ್ರಿ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ನಡೆದ ಟಿ.ಎಸ್. ಸಿ. 2 ಹಾಗೂ ಮಂಗಳೂರಿನ ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ನಡೆದ ಟಿ.ಎಸ್ ‌.ಸಿ. 3 ರಲ್ಲಿ ತೃಪ್ತಿ ಅವರು ಪಾಲ್ಗೊಂಡಿದ್ದರು.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಿಂದ ಒಟ್ಟು ಮೂರು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಪ್ರತಿಕಾ ಫಸ್ಟ್ ಕ್ಯಾಂಪ್ , ಮಂಜುನಾಥ್ ಸೆಕೆಂಡ್ ಕ್ಯಾಂಪ್ ವರೆಗೆ ಭಾಗವಹಿಸಿದ್ದರು.

ತೃಪ್ತಿ ಗೂನಡ್ಕ ಅವರು ಈ ಮೂರೂ ಕ್ಯಾಂಪ್ ಗಳ ತನಕ ತಲುಪಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಫೈಯರಿಂಗ್ ವಿಭಾಗದಲ್ಲಿ ಒಟ್ಟು 50ರಲ್ಲಿ 40 ಅಂಕವನ್ನು ಪಡೆದುಕೊಂಡಿದ್ದಾರೆ.

ಈಕೆಗೆ ನೆಹರೂ ಮೆಮೋರಿಯಲ್ ಕಾಲೇಜಿನ ಲೆಫ್ಟಿನೆಂಟ್ ಸೀತಾರಾಮ ಅವರು ಮಾರ್ಗದರ್ಶನ ನೀಡಿದ್ದಾರೆ. ತೃಪ್ತಿ ಅವರು ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕ ದಿ. ಪದ್ಮನಾಭ ಹಾಗೂ ಶ್ರೀಮತಿ ಪ್ರಮೀಳಾ ದಂಪತಿಯ ಪುತ್ರಿ.