ಸಂಜೆ 5 ಘಂಟೆಗೆ ಬೀರಮಂಗಲದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ
ಸುಳ್ಯ ಹಳೆಗೇಟು ಲಕ್ಷ್ಮಿ ಆಟೋ ಇಲೆಕ್ಟ್ರಿಕಲ್ ವರ್ಕ್ಸ್ ಮಾಲಕ ಸತ್ಯ ನಾರಾಯಣ ರವರ ಅಕಾಲಿಕ ನಿಧನಕ್ಕೆ ಸುಳ್ಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸಂತಾಪ ಸೂಚನೆ ಮಾಡಿದ್ದಾರೆ.
ಇಂದು ಸಂಜೆ ೫ ಘಂಟೆಗೆ ಸತ್ಯ ಅವರ ಪಾರ್ಥಿವ ಶರೀರವನ್ನು ಸುಳ್ಯದ ದಕ್ಷಿಣ ಬೀರಮಂಗಲದ ೩ ನೇ ಅಡ್ಡ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಸುಳ್ಯದ ಎಲ್ಲಾ ಗ್ಯಾರೇಜ್ ಮಾಲಕರು ಸಂಜೆ ವೇಳೆ ತಮ್ಮ ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಸಹಕರಿಸುವಂತೆ ಸಂಘದ ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪ್ಪಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತಿಮ ವಿಧಿವಿಧಾನ ಕಾರ್ಯಗಳು ಕೇರಳದ ಅವರ ತರವಾಡಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.