ಪಾಲಡ್ಕ : ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮಳಿಗೆಗೆ ಡಿಕ್ಕಿ ಹೊಡೆದ ಕಾರು

0

ಕಾರು ಜಖಂ,ಅಂಗಡಿಗೆ ಹಾನಿ, ಚಾಲಕ ಅಪಾಯದಿಂದ ಪಾರು

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಅಂಗಡಿಯೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಆ 16 ರಂದು ತಡ ರಾತ್ರಿ ಮಾಣಿ ಮೈಸೂರು ಹೆದ್ದಾರಿ ಪಾಲಡ್ಕ ಎಂಬಲ್ಲಿ ಸಂಭವಿಸಿದೆ.

ಪಾಲಡ್ಕ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಬಂದು ಹನೀಫ್ ಎಂಬುವವರ ಅಂಗಡಿಗೆ ಗುದ್ದಿದ್ದು ಘಟನೆಯಿಂದ ಅಂಗಡಿಗೆ ಹಾನಿಯಾಗಿದ್ದು, ಕಾರು ಕೂಡ ಜಖಂ ಗೊಂಡಿದೆ.
ತಡ ರಾತ್ರಿ ಡಿಕ್ಕಿ ಸಂಭವಿಸಿದ ಕಾರಣ ಅಂಗಡಿಯಲ್ಲಿ ಯಾರು ಇಲ್ಲದೇ ಇದ್ದ ಹಿನ್ನಲೆ ದೊಡ್ಡ ಅನಾಹುತ ತಪ್ಪಿದೆ.