ಕೊಲ್ಲಮೊಗ್ರು ಪೇಟೆಯಲ್ಲಿ ಒಮ್ಮಿಂದೊಮ್ಮೆಲೆ ಅಲ್ಪಕಾಲ ಭಾರಿ ಮಳೆ ಸುರಿದ ಘಟನೆ ಇಂದು ಮದ್ಯಾಹ್ನ ವರದಿಯಾಗಿದೆ.
ಕೊಲ್ಲಮೊಗ್ರು ಪೇಟೆಯಲ್ಲಿ ಇಂದು ಮಧ್ಯಾಹ್ನ ಕೇವಲ 5 – 10 ನಿಮಿಷಗಳ ಕಾಲ ಜೋರಾಗಿ ಮಳೆ ಬಂದಿದ್ದು ಒಮ್ಮೆಲೆ ನೀರು ಹರಿದು ಬಂದಿದೆ. ಸ್ವಲ್ಪ ಹೊತ್ತು ಮಳೆ ಬಂದು ಮತ್ತೆ ನಿಂತಿತ್ತಾದರೂ ಏಕಾಏಕಿ ಮಳೆ ಬಂದು ನೀರು ಹರಿಯತೊಡಗಿತು. ಈ ರೀತಿ ಮಳೆ ಬರುವುದು ಬಹಳ ಅಪರೂಪವಾಗಿದೆ.