ಸುಳ್ಯ ಎನ್ಎಂಸಿ ಅಂತಿಮ ಪದವಿ ಫಲಿತಾಂಶ ಪ್ರಕಟ : ಶೇ. 94.55 ಫಲಿತಾಂಶ ದಾಖಲು

0

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಅಂತಿಮ ವರ್ಷದ ಪದವಿ ಫಲಿತಾಂಶ ಪ್ರಕಟಗೊಂಡಿದ್ದು ಒಟ್ಟು 5 ವಿಭಾಗಗಳಲ್ಲಿ 94.55% ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ ಹಾಜರಾದ 18 ವಿದ್ಯಾರ್ಥಿಗಳಲ್ಲಿ 15 ಮಂದಿ ಉತ್ತೀರ್ಣರಾಗಿದ್ದು, 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 5 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತರರಾಗಿ ಶೆ. 82.35 ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 71 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ. ಇದರಲ್ಲಿ 46 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಎಲ್ಲರೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೆ. 85.71 ಫಲಿತಾಂಶ ದಾಖಲಾಗಿದೆ. ಸಮಾಜಕಾರ್ಯ ವಿಭಾಗದ 17 ವಿದ್ಯಾರ್ಥಿಗಳಲ್ಲಿ 17 ಮಂದಿಯೂ ಉತ್ತೀರ್ಣರಾಗಿ ಶೇ 100 ಫಲಿತಾಂಶದೊಂದಿಗೆ 13 ಮಂದಿ ವಿಶಿಷ್ಟ ಶ್ರೇಣಿ ಮತ್ತು 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಬಿಎ ವಿಭಾಗದಿಂದ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 18 ಮಂದಿ ಉತ್ತೀರ್ಣರಾಗಿದ್ದಾರೆ. 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶೇಕಡ 90 ಫಲಿತಾಂಶ ದಾಖಲಾಗಿದೆ.