ವರ್ಲ್ಡ್ ಸೀನಿಯರ್ ಸಿಟಿಜನ್ಸ್ ಡೇ ಅಂಗವಾಗಿ ಬೆಳ್ಳಾರೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ಆ. 21ರಂದು ನಡೆಯಿತು.
ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಸದಸ್ಯ ದಯಾಕರ ಆಳ್ವ ಅವರ ತಾಯಿ 93 ವರ್ಷದ ಲಲಿತಾ ಎಸ್. ಆಳ್ವ ಮತ್ತು ಕ್ಲಬ್ಬಿನ ಸದಸ್ಯರಾದ 75 ವರ್ಷ ಪ್ರಾಯದ ವೆಂಕಟಕೃಷ್ಣ ರಾವ್ ಮತ್ತು 99 ವರ್ಷ ಪ್ರಾಯದ ಎಂ. ಸೀತಾರಾಮ್ ರಾವ್ ಮತ್ತು ಅವರ ಪತ್ನಿ ಹಾಗೂ ವೆಂಕಟಕೃಷ್ಣ ರಾವ್ ಅವರ ಅಕ್ಕ ಕೃಷ್ಣಕುಮಾರಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷೆ ಉಷಾ ಬಿ. ಭಟ್, ಸದಸ್ಯರಾದ ಗಣೇಶ್ ರೈ, ಪದ್ಮನಾಭ ಶೆಟ್ಟಿ, ಹೊನ್ನಪ್ಪ, ರಕ್ಷಿತ್ ಪೆರುವಾಜೆ, ದಯಾಕರ ಆಳ್ವ, ವಿಠಲ ಶೆಟ್ಟಿ, ಸುನೀತಾ ಮನೋಹರ್ ಉಪಸ್ಥಿತರಿದ್ದರು.