ಸುಳ್ಯ :ಅಷ್ಟಮಿ, ಮೊಸರು ಕುಡಿಕೆ,ಗಣೇಶ ಚತುರ್ಥಿ,ಈದ್ ಮಿಲಾದ್ ಹಿನ್ನಲೆಯಲ್ಲಿ ಸುಳ್ಯ ಠಾಣೆಯಲ್ಲಿ ಶಾಂತಿ ಸಭೆ

0

ಅಷ್ಟಮಿ, ಮೊಸರು ಕುಡಿಕೆ, ಗಣೇಶ ಚತುರ್ಥಿ, ಈದ್ ಮಿಲಾದ್ ಸರಣಿ ಹಬ್ಬದ ಅಂಗವಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಆ.30 ರಂದು ಶಾಂತಿ ಸಭೆ ನಡೆಸಲಾಯಿತು.

ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಹಬ್ಬಆಚರಣೆಯ ಸಂಧರ್ಭ ಸಂಘಟಕರು, ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಅವರು ಕಾನೂನು ಸುವ್ಯವಸ್ಥೆಗೆ ಪೂರಕವಾಗಿ ಹಬ್ಬ ಆಚರಿಸುವಂತೆ ಸೂಚನೆಗಳನ್ನು ನೀಡಿದರು.


ಮೊಸರು ಕುಡಿಕೆ ಕಾರ್ಯಕ್ರಮ,ಮೆರವಣಿಗೆ ಸಂಧರ್ಭ ಸಂಘಟಕರು ಹೆಚ್ಚಿನ ಜಾಗೃತೆ ವಹಿಸಿಕೊಳ್ಳಬೇಕು. ಮತ್ತು ಮಡಿಕೆಗಳನ್ನು ಕಟ್ಟುವ ಸ್ಥಳದಲ್ಲಿ ಯಾವುದೇ ವಿದ್ಯುತ್ ಲೈನ್ ಗಳು ತಾಗದೆ ಇರುವ ಬಗ್ಗೆ ನೋಡಿಕೊಳ್ಳಬೇಕು. ಮೆರವಣಿಗೆ ಸಂಧರ್ಭ ಸುಳ್ಯ ನಗರದ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿರುವ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗದಂತೆ ನೋಡಿಕೊಳ್ಳಬೇಕೆಂದರು.


ಚೌತಿಯ ಸಂಧರ್ಭ ಶ್ರೀ ಗಣೇಶನ ಮೂರ್ತಿ ಇರಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಂಘಟಕರು ಸಿ ಸಿ ಕ್ಯಾಮರ ವ್ಯವಸ್ಥೆ ಮಾಡಿಕ್ಕೊಂಡು,ಬೆಂಕಿ ಆಕಸ್ಮಿಕ ಮುಂತಾದ ಘಟನೆ ಆಗದಂತೆ ಹೆಚ್ಚರ ವಹಿಸಿ ಮುಂಜಾಗ್ರತಾ ಕ್ರಮವಾಗಿ ಪೆಂಡಾಲ್ ಸಮೀಪ ಮರಳು ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡಿರಬೇಕು.ಅಲ್ಲದೆ ಅಗ್ನಿ ಶಾಮಕ ಇಲಾಖೆಯ ಮತ್ತು ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದಿರಬೇಕು.
ವಿಸರ್ಜನೆ ವೇಳೆ ಸಂಘಟಕರು ಪೂರ್ಣ ಜವಾಬ್ದಾರಿ ವಹಿಸಿ ಈಜು ಬರುವವರನ್ನು, ಮತ್ತು ಮದ್ಯಪಾನ ಮಾಡದೇ ಇರುವವರನ್ನು ವಿಸರ್ಜನೆ ಸಮಯ ಬಳಸಿಕ್ಕೊಳ್ಳಬೇಕು.ಕಾರಣ ಮಳೆಗಾಲದ ಹಿನ್ನಲೆ ನದಿ, ಹಳ್ಳ,ಕೊಳ್ಳಗಳಲ್ಲಿ ನೀರು ತುಂಬಿದ್ದು ಹೆಚ್ಚಿನ ಜಾಗೃತೆ ವಹಿಸಿಕೊಳ್ಳ ಬೇಕೆಂದರು.

ಮುಸಲ್ಮಾನ ಭಾಂದವರ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ವರ್ಷಂ ಪ್ರತಿ ಆಚರಣೆ ಮಾಡುವ ರೀತಿ ಶಾಂತಿ ಸೌಹಾರ್ದತೆ ಯಿಂದ ಆಚರಣೆ ಮಾಡಿ. ಅಲ್ಲದೆ ಬೇರೆ ಯಾವುದೇ ರೀತಿಯ ರ್ಯಾಲಿಯ ದೂರ ಹೆಚ್ಚು ಮಾಡುವುದು, ರಸ್ತೆ ಸಂಚಾರಕ್ಕೆ ತೊಡಕಾಗುವ ರೀತಿ ಮಾಡುವುದು ಈ ರೀತಿ ಆಗ ಬಾರದು ಎಂದರು.

ಒಟ್ಟಿನಲ್ಲಿ ಸುಳ್ಯ ಶಾಂತಿಯುತ ಮತ್ತು ಸೌಹಾರ್ದಯುತ ಊರಾಗಿದೆ.ಇದನ್ನು ಇದೇ ರೀತಿ ಪರಸ್ಪರ ಪ್ರೀತಿ ವಿಶ್ವಾಸ ಗಳಿಂದ ಇರಲು ಮತ್ತು ಶಾಂತಿಯುತವಾಗಿ ಇರಲು ಎಲ್ಲರೂ ಸಹಕರಿಸಿ ಎಂದರು.

ಸಭೆಯಲ್ಲಿ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಸೇರಿ ಸುಮಾರು 50 ಕ್ಕೂ ಹೆಚ್ಚು ಮಂದಿ ಹಾಜರಿದ್ದರು.

ಮುಖಂಡರುಗಳಾದ ಬೂಡು ರಾಧಾಕೃಷ್ಣ ರೈ,ಬುದ್ಧ ನಾಯ್ಕ,ಸುನೀಲ್ ಕೇರ್ಪಳ,ಶಿವಪ್ರಸಾದ್ ಕೆ, ಸುರೇಶ್ ಕುಮಾರ್ ಎಮ್,ಬಾಲಚಂದ್ರ ಜಿ,ಕೆ ರಾಜು ಪಂಡಿತ್,ಕೆ ಶಿವನಾಥ್ ರಾವ್ ಹಳೆಗೇಟು,ಹರಿಪ್ರಸಾದ್ ಎಲಿಮಲೆ,ರವಿಚಂದ್ರ ಕೆ,ಯೋಗರಾಜ್ ಬಿ,ಕೌಶಿಕ್ ಎಸ್,ಶಶಿಧರ ನಾಯರ್ ಕೆ, ಬಿ. ರಾಘವ ರಾವ್,ಯಶವಂತ ಎಮ್ ಸಿ,ನಿತಿನ್ ಬಿ ಟಿ,ಹರಿಪ್ರಸಾದ್ ಎಲಿಮಲೆ,ಸನತ್ ಪಿ,ಪ್ರಕಾಶ್,ರತ್ನಾಕರ ರೈ,
ಭರತ್ ಪಿಂಡಿಮನೆ,ಸೋಮಶೇಖರ ಪೈಕ,ಲತೀಶ್ ಗುಂಡ್ಯ, ವರ್ಷಿತ್ ಚೊಕ್ಕಾಡಿ, ಸರೋಜಿನಿ ಪೆಲ್ತಡ್ಕ,ಪಿಎಸ್ ಗಂಗಾಧರ್,ಶಶಿಧರ ಎಮ್ ಜೆ,ನಿತಿನ್,ರಾಜೇಶ್ ರೈ ಉಬರಡ್ಕ,ಡಿ ಎಸ್ ಗಿರೀಶ್,
ರಾಮಚಂದ್ರ ಪಿ,ಕೆ ಪ್ರಭಾಕರನ್ ನಾಯರ್,ಗಿರೀಜಾ ಶಂಕರ್, ಲತಾ ಪ್ರಸಾದ್ ಕುದ್ಪಾಜೆ, ಕೆಪಿ ಜಾನಿ,ಇಕ್ಬಾಲ್ ಎಲಿಮಲೆ,ಕೆ ಎಸ್ ಉಮ್ಮರ್,ಅಬ್ದುಲ್ ಮಜೀದ್ ಕೆ ಬಿ,ಹಮೀದ್ ಅಡ್ಕಾರ್,ಬಿ ಅಬ್ದುಲ್ಲಾ
ಸೂಫಿ ಎಲಮಲೆ,ಅಶ್ರಫ್ ಜಿ, ಅಬ್ದುಲ್ ಸಮದ್ ಪಿ ಎಮ್,ಸಿ ಪಿ ಅಬ್ದುಲ್ ರಝಾಕ್,ಮಹಮ್ಮದ್ ಕುಂಞ ಗೂನಡ್ಕ,ಮಹಮ್ಮದ್ ಕುಂಞ,ಅಬ್ದುಲ್ ಆಜಿ ಜಯನಗರ ಇಬ್ರಾಹಿಂ ಜಿ ಎಮ್ ಇವರುಗಳು ಉಪಸ್ಥಿತರಿದ್ದರು.