ಸೆ.4 ರಂದು ಸುಳ್ಯದಲ್ಲಿ 11 ನೇ ವರ್ಷದ ಮೊಸರು ಕುಡಿಕೆ ಉತ್ಸವ- ಶೋಭಾಯಾತ್ರೆ

0

ಹಿಂದೂ ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನೆ ದಿನವನ್ನಾಗಿ ಮೊಸರು ಕುಡಿಕೆ ಉತ್ಸವದ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಯ 11 ನೇ ವರ್ಷದ ಉ್ಸವದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ರವರು ಹೇಳಿದರು.

ಸುಳ್ಯದಲ್ಲಿ ಸೆ.4 ರಂದು ನಡೆಯಲಿರುವ 11 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀ ಕೃಷ್ಣ ಪರಮಾತ್ಮನು ಧರ್ಮ ರಕ್ಷಣೆಗಾಗಿ ಭಗವದ್ಗೀತೆ ಸಾರವನ್ನು ಸಾರಿದ ಮಹಾತ್ಮನು.


ಶ್ರೀ ಕೃಷ್ಣನ ಆದರ್ಶದೊಂದಿಗೆ ಬಾಲ ಲೀಲೆಯ ಅವತಾರಗಳನ್ನು ಉತ್ಸವದ ಮೂಲಕ ಸಾದರಪಡಿಸಿ ಹಿಂದೂ ಬಾಂಧವರನ್ನು ಸಂಘಟಿಸುವುದು ಉತ್ಸವದಉದ್ದೇಶವಾಗಿದೆ ಎಂದು ಹೇಳಿದರು.


ಶ್ರೀ ಕೃಷ್ಣ ಜನ್ಮಾಷ್ಠಮಿ ದಿನದಂದು ಸ್ಥಾಪಿಸಲ್ಪಟ್ಟ ಸಂಘಟನೆಯು ಕಳೆದ ಬಾರಿ 60 ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ ರವರು ತಿಳಿಸಿದರು.

ಈ ವರ್ಷದ ಉತ್ಸವದಲ್ಲಿ 17 ಕಡೆಗಳಲ್ಲಿ ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಪ್ರದರ್ಶನ ವಾಗಲಿದೆ. ಧಾರ್ಮಿಕ ಸಭೆಯು ಸಂಜೆ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದ್ದು ಮಾಜಿ ಸಂಸದ ಪ್ರತಾಪ ಸಿಂಹ ಉಪನ್ಯಾಸ ನೀಡಲಿರುವರು ಎಂದು ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ ತಿಳಿಸಿದರು.

ಗೋಷ್ಠಿಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಉಪಾಧ್ಯಕ್ಷ ರವಿಚಂದ್ರ ಕೊಡಿಯಾಲಬೈಲು, ದೇವಿಪ್ರಸಾದ್ ಅತ್ಯಾಡಿ, ಕೋಶಾಧಿಕಾರಿ ನವೀನ್ ಎಲಿಮಲೆ, ಬಜರಂಗದಳ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಸನತ್ ಚೊಕ್ಕಾಡಿ, ರೂಪೇಶ್ ಪೂಜಾರಿಮನೆ, ಮಂಜುನಾಥ ಕಾಟೂರು ಉಪಸ್ಥಿತರಿದ್ದರು.