ಗಾಂಧಿನಗರ :ಸುಳ್ಯ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ ಬಾಲ್ ಪಂದ್ಯಾಟ -2024

0

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಉಪನಿರ್ದೇಶಕರ ಕಚೇರಿ,ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ .ಕ ಜಿಲ್ಲೆ ಮಂಗಳೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರ ಇವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಪದವಿ ಪೂರ್ವ ಕಾಲೇಜುಗಳ ಫುಟ್ ಬಾಲ್ ಪಂದ್ಯಾಟ – 2024 ಸೆ.4 ರಂದು ಗಾಂಧಿನಗರ ಕೆ. ಪಿ. ಎಸ್ ಶಾಲಾ ಮೈದಾನದಲ್ಲಿ ನಡೆಯಿತು.

ಪಂದ್ಯಾಕೂಟದಲ್ಲಿ ತಾಲೂಕಿನ 6 ಕಾಲೇಜುಗಳ ತಂಡ ಭಾಗವಹಿಸಿದ್ದವು.


ಪಂದ್ಯಾಕೂಟದ ಉದ್ಘಾಟನೆಯನ್ನು ಸುಳ್ಯ ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಣ್ಯರುಗಳಾದ ಎನ್. ಎ ರಾಮಚಂದ್ರ, ಎಂ. ವೆಂಕಪ್ಪ ಗೌಡ, ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಪರಮೇಶ್ವರಿ ಎಚ್ .ಆರ್ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಾಂಧಿನಗರ ಕೆ. ಪಿ. ಎಸ್ ನ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ,ನ .ಪಂ ಸದಸ್ಯ ಶರೀಫ್ ಕಂಠಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ .ಕೆ ರೈ,ಪ್ರೌಢ ಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ. ಬಿ ಇಬ್ರಾಹಿಂ,ಪ್ರಭಾರ ಉಪ ಪ್ರಾಂಶುಪಾಲೆ ಜ್ಯೋತಿ ಲಕ್ಷ್ಮಿ,ಪ್ರಾಥಮಿಕ ವಿಭಾಗದ ಮುಖ್ಯಉಪಾಧ್ಯಾಯ ಪದ್ಮನಾಭ,ಸಿ. ಬಿ .ಸಿ ಹಾಗೂ ಎಸ್. ಬಿ .ಸಿ ಸದಸ್ಯರು ರಾಮ ಮುರುಳಿ ಮೊದಲಾದವರು ಉಪಸ್ಥಿತರಿದ್ದರು.

ಸಂಜೆವರೆಗೆ ನಡೆದ 6 ತಂಡಗಳ ಜಿದ್ದಾ ಜಿದ್ದಿನ ಪಂದ್ಯಾಟದಲ್ಲಿ ಅಂತಿಮವಾಗಿ ಅರಂತೋಡು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಸುಳ್ಯ ಎನ್. ಎಂ .ಸಿ ಕಾಲೇಜು ತಂಡ ರನ್ನರ್ ಆಫ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ವನ್ನು ನೀಡಿದ ಬೆಸ್ಟ್ ಗೋಲ್ ಕೀಪರ್ ಬಹುಮಾನವನ್ನು ಅರಂತೋಡು ಕಾಲೇಜು ತಂಡದ ಕೀಪರ್ ಮಹಮ್ಮದ್ ಶಫೀಕ್ ಪಡೆದುಕೊಂಡರೆ ಬೆಸ್ಟ್ ಫ಼ಾರ್ವರ್ಡ್ ಆಗಿ ಮೊಹಮ್ಮದ್ ಹಾಗೂ ಬೆಸ್ಟ್ ಡಿಫೆಂಡರ್ ಸುಳ್ಯ ಎನ್ ಎಂ ಸಿ ಕಾಲೇಜಿನ ಹಫೀಜ್ ಪಡೆದುಕೊಂಡರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕ ಪಿ ಎಸ್ ಕಾಲೇಜು ಪ್ರಾಂಶುಪಾಲೆ ಪರಮೇಶ್ವರಿ ಎಚ್ .ಆರ್, ಶಾಲಾ ಸಮಿತಿ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ,ಸುದ್ದಿ ಪತ್ರಿಕೆ ವರದಿಗಾರ ಹಸೈನಾರ್ ಜಯನಗರ, ಉಪನ್ಯಾಸಕರುಗಳಾದ ಅಬ್ದುಲ್ ಸಮದ್,ಶ್ರೀಮತಿ ಪ್ರೇಮಾ ಬಿ, ಡಾ ಪ್ರದೀಪ್ ಕೆಂಚನ್ನೂರು, ಹಾಗೂ ದೈಹಿಕ ಶಿಕ್ಷಕರರುಗಳು ಉಪಸ್ಥಿತರಿದ್ದರು.


ಪಂದ್ಯಾಟದ ತೀರ್ಪುಗಾರರಾಗಿ ಸುಳ್ಯದ ಖ್ಯಾತ ಫುಟ್ ಬಾಲ್ ಆಟಗಾರರಾದ ಮುನಾಫರ್, ಹೈದರ್ ಅಲಿ, ಶಮಾಲ್ ಸಹಕರಿಸಿದರು.