ಗಾಂಧಿನಗರ :ಪಿ. ಎ ಆರ್ಕೆಡ್ ನಲ್ಲಿ ‘ಬರ್ಕತ್ ಕಲೆಕ್ಷನ್ ‘ಮದರಸ ಪುಸ್ತಕ ಲೇಖನಿ ಸಾಮಗ್ರಿಗಳ ಮಾರಾಟ ಮಳಿಗೆ ಶುಭಾರಂಭ

0

ಸುಳ್ಯದ ಗಾಂಧಿನಗರ ಪಿ ಎ ಆರ್ಕೆಡ್ ನಲ್ಲಿ ಮೊಗರ್ಪಣೆ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ರವರ ಮಾಲಕತ್ವದ ಬರ್ಕತ್ ಕಲೆಕ್ಷನ್ ಮದರಸ ವಿದ್ಯಾರ್ಥಿಗಳ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳ ಮಾರಾಟ ಮಳಿಗೆ ಸೆ. 4 ರಂದು ಉದ್ಘಾಟನೆಗೊಂಡಿತು.

ನೂತನ ಸಂಸ್ಥೆಯನ್ನು ಸಯ್ಯಿದ್ ಕುಂಬಕ್ಕೋಡು ತಂಙಳ್ ರವರು ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಸಯ್ಯಿದ್ ಹುಸೈನ್ ತಂಙಳ್ ಆದೂರು, ಗಾಂಧಿನಗರ ಮಸೀದಿ ಮುದರ್ರಿಸ್ ಇರ್ಫಾನ್ ಸಖಾಫಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಸುಳ್ಯ ಪೊಲೀಸ್ ಠಾಣಾ ಎ ಎಸ್ ಐ ತಾರಾನಾಥ್,ಸುಳ್ಯ ಎ ಪಿ ಎಂ ಸಿ ಮಾಜಿ ನಿರ್ದೇಶಕ ಹಾಜಿ ಆದಂ ಕಮ್ಮಾಡಿ, ಅನ್ಸಾರುಲ್ ಮುಸ್ಲಿಮಿನ್ ಅಧ್ಯಕ್ಷ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ಸ್, ಕೆ ಎಂ ಜೆ ಸುಳ್ಯ ಸರ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಅಡ್ವಕೇಟ್ ಮೂಸಾ ಪೈಂಬೆಚ್ಚಾಲು, ಎಸ್ ವೈ ಎಸ್ ಮುಖಂಡ ಸಿದ್ದೀಕ್ ಕಟ್ಟೆಕ್ಕಾರ್ಸ್,ಉದ್ಯಮಿ ಹಸ್ಸನ್ ಹಾಜಿ ಬಾಳೆಮಕ್ಕಿ,ಅಬ್ದುಲ್ ರಜಾಕ್ ಹಾಜಿ ಶೀತಲ್, ಹಿರಿಯರಾದ ಡಿ ಇಬ್ರಾಹಿಂ ಗಾಡಿ,ಸುಳ್ಯ ಮೊಬೈಲ್ ರಿಟೇಲರ್ ಅಸೋಸಿಯೆಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಸ್ ವೈ, ಮದರಸ ಅಧ್ಯಾಪಕ ಅಬ್ದುಲ್ ರಶೀದ್ ಝೖನಿ, ಮುನೀರ್ ಸಿಲೋನ್ ಮುಂತಾದವರು ಉಪಸ್ಥಿತರಿದ್ದರು.


ಬಳಿಕ ನಡೆದ ಉದ್ಘಾಟನ ಸಮಾರಂಭ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ ಬಿ ಸುಧಾಕರ್ ರೈ ಹಾಗೂ ಎ ಎಸ್ ಐ ತಾರಾನಾಥ್ ರವರು ಮಾತನಾಡಿ ಸಂಸ್ಥೆಗೆ ಶುಭಾರೈಸಿದರು.


ಈ ಸಂಸ್ಥೆಯಲ್ಲಿ ಉಲಾಮಗಳ ವಸ್ತ್ರಗಳು,ನಮಾಜ್ ನಿರ್ವಣೆಗೆ ಬೇಕಾದ ಮುಸಲ್ಲ, ತಸ್ಬಿಹ್ ಮಾಲೆ, ಮದರಸ ಪುಸ್ತಕ, ಲೇಖನಿ, ಕಿತಾಬ್, ಮಸೀದಿ ಮದರಸ ಸಾಮಗ್ರಿಗಳು, ಸುಗಂಧ ದ್ರವ್ಯಗಳು, ಹಿಜಾಬ್ ಮುಂತಾದ ವಸ್ತುಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕ ಹಾಫಿಲ್ ಸೌಕತ್ ಅಲಿ ಸಖಾಫಿ ತಿಳಿಸಿದರು.


ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಥಳೀಯ ವ್ಯಾಪಾರ ಸಂಸ್ಥೆಗಳ ಮಾಲಕರು, ಸ್ಥಳೀಯರು ಉಪಸ್ಥಿತರಿದ್ದರು.