ಸುಳ್ಯದಲ್ಲಿ ಶಂಕರ ಲಿಂಗಂ ನೇತೃತ್ವದ ಎಲ್.ಐ.ಸಿ. ಪಾಲಿಸಿದಾರರ ಸೇವಾ ಕೇಂದ್ರ ಮುತ್ತುಶ್ರೀ ಎಂಟರ್ ಪ್ರೈಸಸ್ ಶುಭಾರಂಭ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂ ನಲ್ಲಿ ಭಾರತೀಯ ಜೀವ ವಿಮಾ ನಿಗಮದ ಸಿ.ಎಮ್.ಕ್ಲಬ್ ಮೆಂಬರ್ ಶಂಕರ್ ಲಿಂಗಂ ಕೆ. ಯವರ ನೇತೃತ್ವದ ಅಧಿಕೃತ ಎಲ್.ಐ.ಸಿ. ಪ್ರೀಮಿಯಂ ಸ್ವೀಕೃತಿ ಮತ್ತು ಪಾಲಿಸಿದಾರರ ಸೇವಾ ಕೇಂದ್ರ ಮುತ್ತುಶ್ರೀ ಎಂಟರ್ ಪ್ರೈಸಸ್ ಸೆ.5 ರಂದುಶುಭಾರಂಭಗೊಂಡಿತು.

ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕ ಉಜ್ವಲ್ ಹೆಚ್ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಸದಸ್ಯಕೆ.ಪಿ ಜಾನಿ ಕಲ್ಲುಗುಂಡಿ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ .ಬಿ ಸುಧಾಕರ ರೈ, ಶ್ರೀರಾಮ ಫ್ಯಾಬ್ರಿಕೇಶನ್ ಮಂಗಳೂರು ಮಾಲಕ
ಪಿ .ಎಸ್ ರಾಮನ್, ದೇವ ನರ್ಸರಿ ಮಾಲಕ ಸೋಜೋ ಜಾನ್, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ವಿಜಯ್. ಎಂ,ಎಲ್.ಐ.ಸಿ. ಶಾಖಾಧಿಕಾರಿ ಗುರುದತ್ ನಾಯಕ್ ಕೆ, ಎಲ್.ಐ‌.ಸಿ ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಗ್ಗಡೆ, ರೀಕೋ ಸೊಸೈಟಿ ಉಪಾಧ್ಯಕ್ಷ ಉಮೇಶ್. ಜಿ ಐವರ್ನಾಡು, ಸೂಂತೋಡು ಎಂಪೋರಿಯಂ ಮಾಲಕ ಸೂರಯ್ಯ,ತೊಡಿಕಾನ ದೇವಸ್ಥಾನದ ನಿಕಟ ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ಉಪಸ್ಥಿತರಿದ್ದರು.


ಕು.ಗಾನವಿ ಪ್ರಾರ್ಥಿಸಿದರು. ಎಲ್.ಐ.ಸಿ.ಪ್ರತಿನಿಧಿ ಶಂಕರ ಲಿಂಗಂ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಮುತ್ತುಕುಮಾರಿ ವಂದಿಸಿದರು. ಎಲ್.ಐ.ಸಿ.ಪ್ರತಿನಿಧಿ ಸೋಮನಾಥ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.


ಸೇವಾ ಕೇಂದ್ರದಲ್ಲಿ ಎಲ್ಲಾ ತರದಎಲ್.ಐ.ಸಿ.ಪಾಲಿಸಿಗಳ ಸೇವೆ, ವಾಹನ ವಿಮೆ,ಆರೋಗ್ಯ ವಿಮೆ,ಕೆ.ಎಸ್.ಆರ್.ಟಿ.ಸಿ.ಅವತಾರ್ ಟಿಕೆಟ್ ಬುಕ್ಕಿಂಗ್, ಟ್ರೈನ್ ,ವಿಮಾನ ಟಿಕೆಟ್ ಬುಕ್ಕಿಂಗ್, ಮನಿ ಟ್ರಾನ್ಪರ್ಸ್, ಜೆರಾಕ್ಸ್, ಲ್ಯಾಮಿನೇಶನ್, ಸ್ಪೈರಲ್ ಬೈಂಡಿಂಗ್ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.


ಮುತ್ತುಶ್ರೀ ಎಂಟರ್ ಪ್ರೈಸಸ್ ಇದರ ಕೇಂದ್ರ ಕಚೇರಿ ಸುಳ್ಯದ ರಥಬೀದಿಯ ಶ್ರೀದೇವಿ ಕಾಂಪ್ಲೆಕ್ಸ್ ನಲ್ಲಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.