ಜಟ್ಟಿಪಳ್ಳದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ 31ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಜಟ್ಟಿಪಳ್ಳದ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ಸೆ. 7 ರಂದು ನಡೆಯಿತು.

ಬೆಳಿಗ್ಗೆ ಪುರೋಹಿತ ಶ್ರೀ ನಾಗರಾಜ ಭಟ್ ಮತ್ತು ಬಳಗದವರಿಂದ ಗಣಪತಿ ಹವನ ಸಾಮೂಹಿಕ ಪ್ರಾರ್ಥನೆ, ನೂತನ ಕಿರೀಟಕ್ಕೆ ಶುದ್ದಿ ಕಲಶ,ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಡೆಯಿತು.

ಬಳಿಕ ಸ್ಥಳೀಯ ಮಹಿಳೆಯರಿಂದ ಭಜನಾ ಸಂಕೀರ್ತನೆಯು ಅಯೋದ್ಯಾ ಕಲಾ ವೇದಿಕೆಯಲ್ಲಿ ನಡೆಯಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮಹಾಮಂಗಳಾರತಿ ಬಳಿಕ ಸಂಜೆ ಗಣಪತಿಯ ವಿಜೃಂಭಣೆಯ ಶೋಭಾಯಾತ್ರೆಯು ಅಲಂಕೃತ ಮಂಟಪದಲ್ಲಿ ಜಟ್ಟಿಪಳ್ಳದಿಂದ ಹೊರಟು ನಾವೂರು,ಗಾಂಧಿನಗರ, ಸುಳ್ಯ ಮುಖ್ಯ ರಸ್ತೆ ಮೂಲಕ ಸಾಗಿ ಶ್ರೀರಾಂ ಪೇಟೆ ಯಿಂದ ಜಟ್ಟಿಪಳ್ಳ, ಬೊಳಿಯಮಜಲು ರಸ್ತೆ ಮೂಲಕ ಬೊಳಿಯಮಜಲು ಕೊಡಿಯಾಲಬೈಲ್ ಕಂದಡ್ಕ ಹೊಳೆಯಲ್ಲಿ ಜಲಸ್ಥಂಭನಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎಂ ಆರ್,ಉಪಾಧ್ಯಕ್ಷ ರಮಾನಂದ ರೈ,ಪ್ರಧಾನ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಶ್ರೀರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಪದಾಧಿಕಾರಿಗಳು,ಊರವರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.