ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ: ಚಿತ್ರಕಲೆ, ಕೇರಂ, ಚೆನ್ನೆಮಣೆ ಸ್ಪರ್ಧೆಗಳ ಉದ್ಘಾಟನೆ

0

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2024 ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7 ರಿಂದ ಆರಂಭ ಗೊಂಡಿದ್ದು ಸೆ.9 ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಸೆ.8.ರಂದು ಚಿತ್ರಕಲಾ ಮತ್ತು ರಸ- ಸ್ಪರ್ಧೆ ,ಕೇರಂ ಮತ್ತು ಚೆನ್ನೆಮಣೆ , ಕಸದಿಂದ ರಸ -ಸ್ಪರ್ಧೆಗಳು ಉದ್ಘಾಟನೆ ಗೊಂಡಿತು.

ನಿವೃತ್ತ ಶಿಕ್ಷಕಿ ಶ್ರೀಮತಿ ಪದ್ಮಾವತಿ ಚಿನ್ನಪ್ಪ ಗೌಡ ಶಾಂತಿಸದನ ರವರು ಉದ್ಘಾಟಿಸಿ ಮಾತನಾಡಿ “ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯಿಂದ.ಅದರ ಫಲ ಭಕ್ತರಿಗೆ ಭಗವಂತನು ಕರುಣಿಸುತ್ತಾನೆ.’ ಎಂದು ಹೇಳಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಅಧ್ಯಕ್ಷ ಸವಿತಾರ ಮುಡೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಗಣೆಶೋತ್ಸವ ಸಮಿತಿಯ ಕಾರ್ಯದರ್ಶಿ ಕೇಶವ ಕುದ್ವ, ಕಾರ್ಯಕ್ರಮ ಸಂಚಾಲಕ ಸತೀಶ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಧ್ಯ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಗುರು ಪ್ರಸಾದ್ ತೋಟ ಸ್ವಾಗತಿಸಿದರು.ಜೀವನ್ ಶೆಟ್ಟಿಗದ್ದೆ ನಿರೂಪಿಸಿದರು.ಕೇಶವ ಕುದ್ವ ವಂದಿಸಿದರು.

ಉತ್ಸವ ಕಾರ್ಯಕ್ರಮ ಬೆಳಗ್ಗಿನ ಪೂಜೆ ಪ್ರಸಾದ ವಿತರಣೆ, ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು.ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ.
ಸಂಜೆ ವನಿತಾ ಸಮಾಜ ರವರಿಂದ ಭಜನಾ ಸಂಕೀರ್ತನೆ.ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂ7.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಜಿ ಸಂಸದ ನಳಿನ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ. ಫಾರೆಸ್ಟ್ ಕ್ರೀಯೇಟರ್ಸ್ ,ಗ್ರೀನ್ ಹೀರೋ ಆಪ್ ಇಂಡಿಯಾ ಸಂಸ್ಥಾಪಕ ಡಾ.ಆರ್. ಕೆ ನಾಯರ್ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಉಪಸ್ಥಿತರಿರುವರು.‌


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂ.ಗಂ.6 ರಿಂದ 7ತನಕ ಬೆಳ್ಳಾರೆ ಕಲಾಮಂದಿರ್ ಡ್ಯಾನ್ಸ್ ಕ್ರೂ ಪ್ರಸ್ತುತಿಯ ನೃತ್ಯ ವೈವಿಧ್ಯ, ರಾತ್ರಿ .ಗಂ 8 ರಿಂದ ಕೊಡವೂರು ನೃತ್ಯ ನಿಕೇತನ ಪ್ರಸ್ತುತಿಯ ನಾರಸಿಂಹ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

ಸೆ.9 (ನಾಳೆ): ವೈಭವದ ಶೋಭಾಯಾತ್ರೆ:
ಸೆ.9 ರಂದು ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ಯವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.


ಸಂ.ಗಂ. 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ ಜಿಲ್ಲೆಯ ಪ್ರಸಿದ್ಧ ಹುಲಿ ವೇಷ ತಂಡದಿಂದ ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.