ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ

0

ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟವು ಈ ಬಾರಿ ಸರಕಾರಿ ಎಲಿಮಲೆ ಪ್ರೌಢಶಾಲೆಯಲ್ಲಿ ನಡೆಯಲಿದ್ದು ಆ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ ಸಂಘಟನಾ ಸಮಿತಿಯ ವತಿಯಿಂದ ಕ್ರೀಡಾ ವೈಭವ 2024ರ ಮನವಿ ಪತ್ರ ಬಿಡುಗಡೆ ಮತ್ತು ಕ್ರೀಡಾ ಲೋಗೋ ಬಿಡುಗಡೆಯು ಇಂದು ಎಲಿಮಲೆ‌ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.

ಟಿ.ಎ.ಪಿ.ಸಿ.ಎಂ.ಎಸ್. ಸುಳ್ಯ ಇದರ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಮತ್ತು ಗುತ್ತಿಗಾರು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಕ್ರೀಡಾಲೋಗೋ ಬಿಡುಗಡೆ ಮಾಡಿದರು. ಸೀ ಫುಡ್ ಸುಳ್ಯ ಇದರ ಮಾಲಕರಾದ ಇಬ್ರಾಹಿಂ ಇವರು ಮನವಿ ಪತ್ರ ಬಿಡುಗಡೆ ಮಾಡಿದರು.


ಸೈಂಟ್ ಮೇರೀಸ್ ಇಂಡಸ್ಟ್ರಿಸ್ ಎಲಿಮಲೆ ಇದರ ಮಾಲಕರಾದ ಪಾಪಚ್ಚನ್ ಇವರು ಕ್ರೀಡಾ ಟೀ ಶಟ್೯ ಬಿಡುಗಡೆ ಮಾಡಿದರು.

ಕ್ರೀಡಾ ಸಂಘಟನಾ ಸಮಿತಿ ಇದರ ಅಧ್ಯಕ್ಷರು ಹಾಗೂ ನೆ. ಕೆಮ್ರಾಜೆ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘ ಇದರ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ‌ ವಿದ್ಯಾರ್ಥಿ ಸಂಘದ ಸ್ಥಾಪಾಕಾಧ್ಯಕ್ಷರು ಹಾಗೂ ಅಜ್ಜಾವರ ಸರಕಾರಿ ಪ್ರೌಢಶಾಲೆ ಯ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಮೆತ್ತಡ್ಕರವರು ಕ್ರೀಡಾಕೂಟದ ತಯಾರಿ ಮತ್ತು ಯೋಜನೆಗಳ ಬಗ್ಗೆ ಮಾತನಾಡಿದರು.

ದೇವಚಳ್ಳ ಗ್ರಾ.ಪಂ.‌ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು ಕ್ರೀಡಾಕೂಟಕ್ಕೆ ಸಹಕಾರ ಕೋರಿ ಮಾತನಾಡಿದರು.

ವೇದಿಕೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ. ಪ್ರೌಢ ಶಾಲೆ ಎಲಿಮಲೆ ಇದರ ಅಧ್ಯಕ್ಷ ಧನಂಜಯ ಬಾಳೆತೋಟ, ಸ. ಪ್ರೌಢಶಾಲೆ ಎಲಿಮಲೆ ಇಲ್ಲಿಯ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ಸಂಧ್ಯಾ ಕೆ., ಸ. ಪ್ರೌಢ ಶಾಲೆ ಎಲಿಮಲೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ, ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಧರ ಗೌಡ, ಎಲಿಮಲೆ‌ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಯ ನಿಕಟಪೂರ್ವಾಧ್ಯಕ್ಷರಾದ ವಿಶ್ವನಾಥ, ಕ್ರೀಡಾಕೂಟ ಸಂಘಟನಾ ಸಮಿತಿಯ ಕಾರ್ಯದರ್ಶಿ ರಂಜಿತ್ ಅಂಬೆಕಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಮುರಳೀಧರ ಮುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಪ್ರಮುಖರಾದ ದಯಾನಂದ ಡಿ.ಟಿ., ಗದಾಧರ ಬಾಳುಗೋಡು, ಲೋಕೇಶ್ ಪೆರ್ಲಂಪಾಡಿ, ಭಾಸ್ಕರ ಬಾಳೆತೋಟ, ಕಿರಣ್ ಗುಡ್ಡೆಮನೆ, ಓಂ ಪ್ರಸಾದ್ ಕಜೆ, ರಾಜೇಶ್ ಮಾವಿನಕಟ್ಟೆ ಹಾಗೂ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.