ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಬಡ್ಡಿ ಪ್ರಕಟಣಾ ಪತ್ರ ಬಿಡುಗಡೆ

0

ಎಣ್ಮೂರು ಸರಕಾರಿ ಪ್ರೌಢ ಶಾಲೆ ಎಣ್ಮೂರು ಶಾಲೆಯ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸುಳ್ಯ ವಿಧಾನ ಸಭಾಕ್ಷೇತ್ರದ ಒಳಗಿನ ಆಟಗಾರ ಒಳಗೊಂಡು 10 ತಂಡಗಳ ಪ್ರೋ ಮಾದರಿಯ ಲೀಗ್ ಕಬಡ್ಡಿ ಪಂದ್ಯಾಟ ನ. 24ರಂದು ನಡೆಯಯಲಿದ್ದು, ಈ ಬಗ್ಗೆ ಸೆ. 22ರಂದು ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಬಡ್ಡಿ ಪ್ರಕಟಣಾ ಪತ್ರ ಬಿಡುಗಡೆ ಮಾಡಲಾಗಿದೆ.


ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಮೇದಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ಸಚಿನ್ ಪಟ್ಟೆ, ಶಾಲಾ ಶಿಕ್ಷಕ ಸಂತೋಷ್, ಲಿಂಗಪ್ಪ ಬೆಳ್ಳಾರೆ, ಪ್ರದೀಪ್ ರೈ, ಕೀರ್ತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತಿ ಇದ್ದರು.