ಕುಕ್ಕಟ್ಟೆ; ಅ.03ರಿಂದ 11ರ ವರೆಗೆ ನವರಾತ್ರಿ ಉತ್ಸವ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನ ದಲ್ಲಿ ನವರಾತ್ರಿ ಪೂಜಾ ಮಹೋತ್ಸವ ವು ಅಕ್ಟೋಬರ್ 3 ರಿಂದ 11ರವರೆಗೆ ನಡೆಯಲಿದೆ.


ಪ್ರತಿದಿನ ವಾಹನಪೂಜೆ, ಆಯುಧಪೂಜೆ, ಸಂಜೆ 6. 30ರಿಂದ ಭಜನಾ ಕಾರ್ಯಕ್ರಮ, ದಿನನಿತ್ಯ ರಾತ್ರಿ ಮಹಾಪೂಜೆಯ ಬಳಿಕ ಭೋಜನ ಪ್ರಸಾದ, ಪ್ರಸಾದ ನಡೆಯಲಿರುವುದು.ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ದುರ್ಗಾನಮಸ್ಕಾರ, ಪುಷ್ಪಪೂಜೆ, ಪಂಚಾಮೃತಭಿಷೇಕ, ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ, ಶ್ರೀದೇವಿ ಅಷ್ಟೋತ್ತರ, ಕುಂಕುಮಾರ್ಚನೆ, ಕರ್ಪೂರಾರತಿ, ಪಂಚಕಜ್ಜಾಯ, ಭಜನಾ ಸೇವೆ ಇನ್ನಿತರ ಸೇವೆಗಳು ಉತ್ಸವ ಸಂದರ್ಭದಲ್ಲಿ ನಡೆಯುತ್ತದೆ.