ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇದರ 31 ನೇ ವಾರ್ಷಿಕೋತ್ಸವದ ಅಂಗವಾಗಿ ಸೆ. 29ರಂದು ಕಬಕದ ಬೈಪದವುನಲ್ಲಿ ನಡೆದ ನೂತನ ಗ್ರಂಥ ಅನಾವರಣ – ಪ್ರಶಸ್ತಿ ಪ್ರದಾನ ಮತ್ತು ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸುಳ್ಯದ ಪಾರಂಪರಿಕ ಮೂಲಿಕಾ ಎಲುಬು ತಜ್ಞ ಮಜಲುಕರೆ ಬಿ. ಶಿವಕುಮಾರ್ ರಿಗೆ ಉಗ್ಗಪ್ಪಕೋಡಿ ವೈದ್ಯ ಪಂಡಿತ ಈಶ್ವರ ಭಟ್ಟ ವೈದ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಜಲುಕರೆ ಪಂಡಿತರೆಂದೇ ಪ್ರಸಿದ್ಧಿ ಪಡೆದಿದ್ದ ಕಲ್ಮಡ್ಕ ಗ್ರಾಮದ ಮಜಲುಕರೆ ದಿ. ನರಸಿಂಹ ಭಟ್ಟರ ಪುತ್ರರಾದ ಬಿ. ಶಿವಕುಮಾರ್ ಮಜಲುಕರೆಯವರು ತಮ್ಮ ತಂದೆಯಿಂದ ಆಶೀರ್ವಾದ ರೂಪವಾಗಿ ಪಡೆದ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದು ಕಳೆದ 42 ವರ್ಷಗಳಿಂದ ಸುಮಾರು 60ರಿಂದ 70 ಸಾವಿರ ಜನರಿಗೆ ಚಿಕಿತ್ಸೆ ನೀಡಿದ್ದಾರೆ.
ಪ್ರಸ್ತುತ ಸುಳ್ಯದ ಅಟ್ಲೂರು ಬಳಿ ವಾಸವಿರುವ ಇವರು ಮಜಲುಕರೆಯಲ್ಲಿ ಕೃಷಿಭೂಮಿಯನ್ನು ಹೊಂದಿದ್ದಾರೆ. ಇವರ ಪತ್ನಿ ಶ್ರೀಮತಿ ಆಶಾಲತ ಗೃಹಿಣಿಯಾಗಿದ್ದಾರೆ. ಹಿರಿಯ ಪುತ್ರಿ ಡಾ. ಶಮಾ ಎಂ.ಡಿ.ಎಸ್. ಅಂತಿಮ ವರ್ಷದಲ್ಲಿ ಓದುತ್ತಿದ್ದರೆ, ಕಿರಿಯ ಪುತ್ರಿ ಕು. ಸಾನ್ನಿಧ್ಯ ಪ್ರಥಮ ವರ್ಷದ ಬಿಇ ಓದುತ್ತಿದ್ದಾರೆ. ಸುಳ್ಯದ ಶ್ರೀರಾಂ ಪೇಟೆಯ ಕಶ್ಯಪ ಬಿಲ್ಡಿಂಗ್ ನ ಹಿಂಭಾಗದಲ್ಲಿ ಕ್ಲಿನಿಕ್ ಹೊಂದಿದ್ದಾರೆ.