ಕು.ಮೋನಾಲಿಕಾ ರೈ ಅಂತರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ 1434 ನೇ ರ್‍ಯಾಂಕ್

0

ವರ್ಲ್ಡ್ ಚೆಸ್ ಫೆಡರೇಶನ್ ವತಿಯಿಂದ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಆಯೋಜಿಸಲ್ಪಟ್ಟ ಅಂತರ್ ರಾಷ್ಟ್ರೀಯ
ಚೆಸ್ ಸ್ಪರ್ಧೆಯಲ್ಲಿ ಕು.ಮೋನಾಲಿಕಾ ರೈ 1434 ನೇ ರ್‍ಯಾಂಕ್ ಪಡೆದು ದಾಖಲೆ ನಿರ್ಮಿಸಿದ್ದಾಳೆ.

ನಿರಂತರವಾಗಿ ನಡೆಯುವ ಚೆಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ವಿಜೇತರಾದ ಸ್ಪರ್ಧಿಗಳನ್ನು ಪರಿಗಣಿಸಿ ರಾಂಕಿಂಗ್ ವರ್ಲ್ಡ್ ಫೆಡರೇಶನ್ ರವರು ಸ್ಪರ್ಧೆ ನಡೆಸಿ ರ್‍ಯಾಂಕ್ ಪಟ್ಟಿಗೆ ಸೇರ್ಪಡೆ ಗೊಳಿಸುತ್ತಾರೆ.


ಈಕೆ ಬೆಂಗಳೂರಿನ ವಿದ್ಯಾಶಿಲ್ಪ ಶಾಲೆಯಲ್ಲಿ 5 ನೇ ತರಗತಿಯ
ವಿದ್ಯಾರ್ಥಿನಿ.
ಆಲೆಟ್ಟಿಯ ಮೊರಂಗಲ್ಲು ಮನೆತನದ ಹಾಗೂ ಬೆಂಗಳೂರಿನ ಸಹಕಾರ ನಗರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ರೈ ಮೊರಂಗಲ್ಲು
ರವರ ಮೊಮ್ಮಗಳು. ಶ್ರೀಮತಿ ನೀಮಾ ಮತ್ತು ನ್ಯಾಯವಾದಿ ಪ್ರಶಾಂತ್ ರೈ ದಂಪತಿಯ ಪುತ್ರಿ.