ನ. 10 : ಸುಳ್ಯದಲ್ಲಿ ತಮಿಳು ಭಾಂದವರ ಸುವರ್ಣ ಮಹೋತ್ಸವ

0

ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಸ್ಪರ್ಧಾ ಕೂಟದಲ್ಲಿ ಮನರಂಜಿಸಿದ ಮಕ್ಕಳು ಮತ್ತು ಹಿರಿಯರು

ಸುಳ್ಯ ಮತ್ತು ಸ್ಥಳೀಯ ತಾಲೂಕುಗಳಲ್ಲಿ ನೆಲೆಸಿರುವ ತಮಿಳು ಭಾಂದವರ ಸುವರ್ಣ ಮಹೋತ್ಸವ ಕಾರ್ಯಕ್ರಮ ನವಂಬರ್ 10 ರಂದು ಸುಳ್ಯದಲ್ಲಿ ನಡೆಯಲಿದೆ.
ಇದರ ಅಂಗವಾಗಿ ತಮಿಳು ಸಮುದಾಯದ ಮಕ್ಕಳಿಗೆ ಮತ್ತು ಹಿರಿಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಅ. 2 ರಂದು ಸುಳ್ಯ ಅಮೃತ ಭವನ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಎಫ್ ಡಿ ಸಿ ಯ ವೈದ್ಯರಾದ ಡಾ. ಸಾಯಿ ಗೀತಾರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಾರೈಸಿದರು.
ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಶಂಕರ ಲಿಂಗಂ ಅಡ್ಯಡ್ಕ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂ ಬಿ ಫೌಂಡೇಷನ್ ಅಧ್ಯಕ್ಷ ಎಂ ಬಿ ಸದಾಶಿವ ಕಾರ್ಯಕ್ರಮದ ಬಗ್ಗೆ ಮಾತನಾಡಿ ‘ತಮಿಳು ಸಮುದಾಯದ ಜನರ ಶ್ರಮಿಕ ಜೀವನ ಮತ್ತು ಸಮಾಜದ ವಿವಿಧ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಸುವರ್ಣ ಮಹೋತ್ಸವದ ಯಶಸ್ವಿಗೆ ಶುಭಾರೈಸಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಕನ್ನ ದಾಸನ್ ಸುಳ್ಯ, ರಾಜ ಕಲ್ಲುಗುಂಡಿ,ಜೀವ ರತ್ನಂ ನಾಗಪಟ್ಟಣ,ಶಿಕ್ಷಣ ಇಲಾಖೆಯ ಪ್ರದೀಪ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಗಾಂಧಿಜಯಂತಿ ಅಂಗವಾಗಿ ರಾಷ್ಟ್ರಪಿತಾ ಮಹಾತ್ಮಾಗಾಂಧಿಜೀ ಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಬಳಿಕ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಳ್ಯ, ಪುತ್ತೂರು, ಕಡಬ ಭಾಗದಿಂದ ಬಂದಿದ್ದ ಹಿರಿಯರು, ಮಕ್ಕಳು, ವಿದ್ಯಾರ್ಥಿಗಳು ಛದ್ಮ ವೇಷ, ತಮಿಳು ಬರವಣಿಗೆ, ತಮಿಳು ಭಾಷಾ ಭಾಷಣ,ತಮಿಳು ಜಾನಪದ ಹಾಡು, ತಮಿಳು ಜೋಗುಳ ಹಾಡು,ಗಾಯನ ಸ್ಪರ್ಧೆ,ತಮಿಳು ಗಾದೆ ಮತ್ತು ವಿವರಣೆ,ತಮಿಳು ಸಂಸ್ಕೃತಿ ನೃತ್ಯ,ಭಕ್ತಿ ಗೀತೆ,ತಮಿಳು ಹಳೆ ಚಿತ್ರ ಗೀತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರಧರ್ಶಿಸಿದರು.

ಬೆಳಿಗ್ಗೆ ಯಿಂದ ಸಂಜೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ತಮಿಳ್ ಭಾಂದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿಕ್ಕೊಂಡರು.

ಕನ್ನ ದಾಸನ್ ಸುಳ್ಯ ರವರು ನೆರೆದಿದ್ದ ಸಭಿಕರಿಗೆ ಬೇರೆ ಬೇರೆ ಟಾಸ್ಕ್ ಗಳನ್ನು ನೀಡಿ ಮನ ರಂಜಿಸಿದರು.

ಪರಿಮಳ ಐವರ್ನಾಡು ಸ್ವಾಗತಿಸಿ ಶಿವಕುಮಾರ್ ಕುಕ್ಕಂದೂರು ವಂದಿಸಿದರು. ಶ್ರೀಮತಿ ಶಕುಂತಲಾ ಹಾಗೂ ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.