ಅ. 12-13: ಬಾಳಿಲದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 12 ಮತ್ತು 13ರಂದು ಬಾಳಿಲದಲ್ಲಿ ಜರಗಲಿದೆ.
ಅ. 12 ರಂದು ಬೆಳಿಗ್ಗೆ 9ಕ್ಕೆ ಶಾರದಾ ದೇವಿಯ ವಿಗ್ರಹ ಆಗಮನ, ಗಣಪತಿ ಹವನ, ಶಾರದಾದೇವಿಯ ಪ್ರತಿಷ್ಠೆ, ಆಭರಣಧಾರಣೆ, ಶಾರದಾದೇವಿಗೆ ಕಾಲು ಉಂಗುರ ಸಮರ್ಪಣೆ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶೇಷಪ್ಪ ಪರವ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿಶ್ರಾಂತ ಶಿಕ್ಷಕಿ ಶ್ರೀಮತಿ ಶೇಷಮ್ಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಬಾಳಿಲ ಗ್ರಾ.ಪಂ. ಪಿಡಿಒ ಹೂವಪ್ಪ ಗೌಡ ಮತ್ತು ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಬಾಬು ಅಜಿಲ ಬಾಳಿಲ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ. ರಂದು ಬೆಳಿಗ್ಗೆ 10.30ರಿಂದ ಮುಕ್ತ ಮತ್ತು 16 ವರ್ಷದೊಳಗಿನ ಕಿರಿಯರ ಕಬಡ್ಡಿ ಪಂದ್ಯಾಟ ಜರಗಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ಅಂಗನವಾಡಿ ಮಕ್ಕಳಿಂದ ಹಿರಿಯ ಪುರುಷ, ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 11.45ರಿಂದ ಸಾರ್ವಜನಿಕ ಮಹಿಳೆಯರಿಗೆ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4.30ರಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ನೇತೃತ್ವದ ತರಬೇತಿ ಪಡೆಯುತ್ತಿರುವ ಮಕ್ಕಳಿಂದ
ಭರತನಾಟ್ಯ ಸಂಗೀತ ಹಾಗೂ ಸಮುದ್ರ ಮಥನ ಎಂಬ ಯಕ್ಷಗಾನ ನಡೆಯಲಿದೆ. ರಾತ್ರಿ 8.00 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಕೀಚಕ ವಧೆ – ಅಗ್ರಪೂಜೆ ನಡೆಯಲಿದೆ. ಅ. 13ರಂದು ಬೆಳಿಗ್ಗೆ ಗೀತಜ್ಞಾನ ಯಜ್ಞ ಘಟಕ ಬಾಳಿಲ ಇವರಿಂದ ಶ್ರೀಮದ್ ಭಗವದ್ಗೀತೆ ಪಾರಾಯಣ ನಡೆಯಲಿದೆ. ಮಧ್ಯಾಹ್ನ 11.30ರಿಂದ ಗಂಟೆಯಿಂದ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು.ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಿಶ್ರಾಂತ ಮುಖ್ಯ ಶಿಕ್ಷಕರಾದ ಎ. ಜತ್ತಪ್ಪರಿಗೆ ರಾಮಚಂದ್ರ ಕೆದಿಲ ಸ್ಮರಣಾರ್ಥ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೊ. ಚಂದ್ರಶೇಖರ ರೈ ಬಜನಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕ ಬಾಬು ಹೊನ್ನಡ್ಕ ಮತ್ತು ಆಲೆಟ್ಟಿ ಗ್ರಾ.ಪಂ.ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಂದರ ಎಂ.ರವರಿಗೆ ಸೇವಾ ಪುರಸ್ಕಾರ, ನಿವೃತ್ತ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ, ಶ್ರೀಮತಿ ಸಿ.ಸಿ. ಬೇಬಿ, ನಿವೃತ್ತ ಕಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ವಸಂತಿ ಎಸ್. ಭಟ್ ಮತ್ತು ಬಾಳಿಲ ವಿದ್ಯಾಬೋಧಿನೀ ಕಿ.ಪ್ರಾ. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿಯವರಿಗೆ ಗೌರವಾರ್ಪಣೆ ನಡೆಯಲಿದೆ. ಡಾ. ಪಲ್ಲವಿ ತೆಕ್ಕಕೆರೆ, ಡಾ. ಕಿರಣ್ ಯು. ಬಾಳಿಲ, ಡಾ. ಮಧುರಾ ಕಾಯಾರ ಮತ್ತು ಡಾ. ಭವಿಷ್ಯ್ ರೈ ಯವರಿಗೆ ವಿಶೇಷ ಪುರಸ್ಕಾರ ನಡೆಯಲಿದೆ. ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ ನಂತರ ವಿಶ್ವದಾಖಲೆ ಬರೆದ ಯೋಗಪಟು ಕು. ಅಕ್ಷಯ ಬಾಬ್ಲುಬೆಟ್ಟು ರವರಿಂದ ಯೋಗಾಸನ ಪ್ರದರ್ಶನ, ಬಳಿಕ ಬಾಳಿಲ ನಟರಾಜ ನೃತ್ಯತಂಡದಿಂದ ನೃತ್ಯ ವೈಭವ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಬಳಿಕ ಅಪರಾಹ್ನ ಕುಣಿತ ಭಜನೆ, ಚೆಂಡೆವಾದನ ಗೊಂಬೆ ಕುಣಿತ, ಬ್ಯಾಂಡ್ ವಾದನ ಸೇರಿದಂತೆ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯ ಬೊಮ್ಮಣಮಜಲು ಹೊಳೆಯಲ್ಲಿ ಜಲಸ್ಥಂಭನ ನಡೆಯುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.