ಸುಳ್ಯ ತಾಲೂಕು ಕಚೇರಿಯಲ್ಲಿ ಎಟೆಂಡರ್ ಆಗಿದ್ದ ಆಲೆಟ್ಟಿ ಗ್ರಾಮದ ಪರಿವಾರಕಾನ ದಿ. ನಾರಾಯಣ ನಾಯ್ಕರ ಪುತ್ರ ಗಂಗಾಧರ ನಾಯ್ಕ ಅಸೌಖ್ಯದಿಂದ ಇಂದು (ಅ. 10) ಸ್ವಗೃಹದಲ್ಲಿ ನಿಧನರಾದರು. ಇವರಿಗೆ 41 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಬೇಬಿ, ಇಬ್ಬರು ಪುತ್ರಿಯರು, ತಾಯಿ ಶ್ರೀಮತಿ ದೇವಕಿ, ಸಹೋದರಿಯರಾದ ಶ್ರೀಮತಿ ತಾರಾಮಣಿ, ಶ್ರೀಮತಿ ಗೀತಾ ಮತ್ತು ಕವಿತಾರನ್ನು ಅಗಲಿದ್ದಾರೆ.