ಮೊಗರ್ಪಣೆ : ಜುಮ್ಮಾ ಮಸ್ಜಿದ್ ನಲ್ಲಿ ಗೌಸ್ ಜೀಲಾನಿ ತಂಙಳ್ ಅನುಷ್ಮರಣೆ

0

ಮೊಗರ್ಪಣೆ: ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಶೇಖ್ ಜೀಲಾನಿ ತಂಙಳ್ ರವರ ಅನುಷ್ಮರಣೆ ಮತ್ತು ರಾತೀಬ್ ಮಜ್ಲಿಸ್ ಅ 20 ರಂದು ರಾತ್ರಿ ನಡೆಯಿತು.

ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿಯವರು ರಾತೀಬ್ ಮಜ್ಲೀಸ್ ನೆರವೇರಿಸಿ ಮಾತನಾಡಿ ಜೀಲಾನಿ ತಂಙಳ್ ರವರ ಜೀವನ ಚರಿತ್ರೆಯನ್ನು ವಿವರಿಸಿದರು.

ಬಳಿಕ ಸಾಮೂಹಿಕ ದುವಾಃ ಕಾರ್ಯಕ್ರಮ ನಡೆದು ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಮುಸ್ಲಿಂ ಭಾಂಧವರು ಭಾಗವಹಿಸಿದ್ದರು.

ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ,ಜೊತೆ ಕಾರ್ಯದರ್ಶಿ ಎಸ್ ವೈ ಅಬ್ದುಲ್ ರೈಮಾನ್ ಸಮಿತಿಯ ಇತರ ಸದಸ್ಯರುಗಳು,ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಹಾಗೂ ಅಧ್ಯಾಪಕ ವೃಂಧದವರು, ಸಯ್ಯಿದ್ ಜೈನುಲ್ ಆಬಿದೀನ್ ತಂಙಳ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.