ಶ್ರೀ ಮಹಾವಿಷ್ಣು ಸಿಂಗಾರಿ ಮೇಳದಿಂದ ನಾಟ್ಯ ಗುರುಗಳಿಗೆ ಸನ್ಮಾನ

0

ಶ್ರೀ ಮಹಾ ವಿಷ್ಣು ಸಿಂಗಾರಿ ಮೇಳ ಬಾಳಿಲ ಇದರ ನೇತೃತ್ವದಲ್ಲಿ ತರಬೇತು ಗೊಳ್ಳುತ್ತಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ತಂಡ, ಭರತನಾಟ್ಯ ತಂಡ ಮತ್ತು ಯಕ್ಷಗಾನ ತಂಡದ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಅ. 20ರಂದು ಮುಪ್ಪೇರ್ಯದ ಶ್ರೀ ಧರ್ಮಶಾಸ್ತ್ರ ಸೇವಾ ಟ್ರಸ್ಟ್ ಆವರಣದಲ್ಲಿ ಜರುಗಿತು.


ಯಕ್ಷಗಾನದ ಗುರುಗಳಾದ ಲಕ್ಷ್ಮೀನಾರಾಯಣ ಗುರಿಕಾನರನ್ನು ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಸುಭಾಷ್ ಚಂದ್ರ ರೈ ತೋಟ, ಶಾಸ್ತ್ರೀಯ ಸಂಗೀತದ ಗುರುಗಳಾದ ಶ್ರೀಮತಿ ಸಾಗರಿಕಾ ಎಸ್. ಆದಿತ್ಯ ಕೋಟೆಯವರನ್ನು ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಮುಗುಪ್ಪು ಮತ್ತು ಭರತನಾಟ್ಯ ತಂಡದ ಗುರುಗಳಾದ ಕು. ವಿಭಾಶ್ರೀ ವಿ. ಗೌಡ ಇವರನ್ನು ಸಾರ್ವಜನಿಕ ದೇವತಾರಾಧನಾ ಸಮಿತಿ ಬಾಳಿಲ ಮುಪ್ಪೇರ್ಯದ ಗೌರವಾಧ್ಯಕ್ಷರಾದ ಯು. ರಾಧಾಕೃಷ್ಣ ರಾವ್ ಉಡುವೆಕೋಡಿಯವರು ಸನ್ಮಾನಿಸಿದರು.


ಬಾಳಿಲ ಗ್ರಾ.ಪಂ. ಉಪಾಧ್ಯಕ್ಷ ರಮೇಶ್ ರೈ, ಶ್ರೀ ಧರ್ಮಶಾಸ್ತ್ರ ಸೇವಾ ಟ್ರಸ್ಟ್ ಮುಪ್ಪೇರ್ಯ ಇದರ ಅಧ್ಯಕ್ಷ ದಾಮೋದರ ಕಲ್ಕಳ ಶುಭ ಕೋರಿದರು. ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೆರಿಯಾ ಇದರ ಅಧ್ಯಕ್ಷರಾದ ಲೋಕೇಶ್ ಬೆಳ್ಳಿಗೆ ಸಭಾಧ್ಯಕ್ಷತೆ ವಹಿಸಿದರು. ಶಿಕ್ಷಕರಾದ ವೆಂಕಟೇಶ್ ಕುಮಾರ್ ಉಳುವಾನ ಸ್ವಾಗತಿಸಿದರು. ಯಕ್ಷಗಾನ ತಂಡದ ಅಧ್ಯಕ್ಷರಾದ ಸುಜಿತ್ ರೈ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಉರುಂಬಿ, ರಮೇಶ್ ಕಲ್ಮಡ್ಕ, ಶ್ರೀಮತಿ ದಿವ್ಯ ಲೋಕೇಶ್ ಸನ್ಮಾನ ಪತ್ರ ವಾಚಿಸಿದರು. ತರಬೇತಿಗೆ ಸಹಕರಿಸಿದ ರಘುರಾಮ ಕೋಟೆಬನ, ಚಂದ್ರಹಾಸ ಮಣಿಯಾಣಿ, ಬಾಲಕೃಷ್ಣ ಮರಂಗಲ, ಶ್ರೀಮತಿ ರಮ್ಯಾ ಪಾಜಪಲ್ಲ ಇವರನ್ನು ಶಾಲು ಹಾಕಿ ಗೌರವಿಸಲಾಯಿತು.