.
ಇಂದು ಆಶ್ಲೇಷ ನಕ್ಷತ್ರ ಹಿನ್ನೆಲೆಯಲ್ಲಿ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರಿ ಭಕ್ತ ಸಂದಣಿ ಇತ್ತು.
ಆಶ್ಲೇಷ ನಕ್ಷತ್ರ ಬಹಳ ಮಹತ್ವ ವಾದದ್ದು ಮತ್ತು ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತಾದಿಗಳು ಆ ದಿನ ಹೆಚ್ಚಾಗಿ ಕುಕ್ಕೆಗೆ ಬರುತ್ತಾರೆ.
ಈ ತಿಂಗಳ ನಾಲ್ಕನೇ ಶನಿವಾರ ಇಂದಾಗಿದ್ದು ಇಲಾಖೆ ಕಛೇರಿಗಳು ,ಬ್ಯಾಂಕುಗಳಿಗೆ ರಜೆ ಇದ್ದುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ಶ್ರೀ ದೇವಳದ ವತಿಯಿಂದ ಭಕ್ತಾದಿಗಳ ದೇವರ ದರ್ಶನಕ್ಕಾಗಿ ಸರತಿಯ ಸಾಲು, ಭೋಜನ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ನೋಡಿಕೊಳ್ಳುವಲ್ಲಿ ಶ್ರೀ ದೇವಳದ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸಿದರು