ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 65 ಕೆ.ಜಿ ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಗ್ರಾಮಸ್ಥರ ಕ್ರೀಡಾಕೂಟ ನ. 2 ರಂದು ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಂಪಿ ಪ್ರಸರಾಂಗ ಕನ್ನಡ ವಿಶ್ವ ವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಡಾ.ಮಾಧವ ಪೆರಾಜೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಗ್ನಿ ಯುವಕ ಮಂಡಲದ ಅಧ್ಯಕ್ಷ ವಿಜಯ್ ಕುಮಾರ್ ಪಿ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ಪೆರಾಜೆ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಎನ್.ಎ.ಜ್ಞಾನೇಶ್ ನಿಡ್ಯಮಲೆ, ಜ್ಯೋತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಉಪಸ್ಥಿತರಿದ್ದರು.
ಕ್ರೀಡೋತ್ಸವ ಪ್ರಯುಕ್ತ 65 ಕೆ. ಜಿ. ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಿತು.
ಪೆರಾಜೆ ಗ್ರಾಮಸ್ಥರಿಗೆ ಪುರುಷರು ಮತ್ತು ಮಹಿಳೆಯರಿಗೆ ಹಲವು ಕ್ರೀಡಾ ಸ್ಪರ್ಧೆಗಳು ನಡೆಯಿತು. ಪುರುಷರ ಕಬಡ್ಡಿ ಪಂದ್ಯಾಟ, ಮಹಿಳೆಯರ ಹಗ್ಗ ಜಗ್ಗಾಟ, ಪುರುಷರ ರಸ್ತೆ ಓಟ, ಪುರುಷ ಮತ್ತು ಮಹಿಳೆಯರಿಗೆ 100ಮೀ ಓಟ, ಮಡಿಕೆ ಒಡೆಯುವುದು, ಲಕ್ಕಿ ಗೇಮ್ ಹಾಗೆಯೇ ಸಾಂಸ್ಕೃತಿಕ ಸ್ಪರ್ಧೆಗಳಾದ ಭಾವಗೀತೆ, ಮದರಂಗಿ ಇಡುವ ಸ್ಪರ್ದೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜಯ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಲಾಗಿ ಜ್ಯೋತಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ, ಸುಳ್ಯ ವಿನಯ್ ಐಸ್ಕ್ರೀಮ್ನ ರಾಜೇಶ್ ಕೆದಿಲಾಯ, ಮಂಜುಷ ಭರತ್ ಶೆಟ್ಟಿ, ಪೆರಾಜೆ ಸೊಸೈಟಿ ನಿರ್ದೇಶಕ ದೀನರಾಜ್ ದೊಡ್ಡಡ್ಕ, ಅಶೋಕರಾಮ ಪಿಲಿಂಗುಳಿ, ಪೆರಾಜೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಕುಂಬಳಚೇರಿ, ಪೆರಾಜೆ ಲೈನ್ಮ್ಯಾನ್ ಬಸವರಾಜ್ ಕಂಬಳಿ, ಜ್ಯೋತಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಮಜಿಕೋಡಿ ಉಪಸ್ಥಿತರಿದ್ದರು.
ಸನ್ಮಾನ:-
ಈ ಸಂದರ್ಭದಲ್ಲಿ ಸ್ಯಾಕ್ಸೋಫೋನ್ ಕಲಾವಿದ ಪೆರಾಜೆ ಬಾಲಚಂದ್ರ ಹಾಗೂ ನಾಟಿ ವೈದ್ಯೆ ಲೀಲಾವತಿ ಮಜಿಕೋಡಿಯವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಡೆದ ಈ ಬಾರಿಯ ಶೈಕ್ಷಣಿಕ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪ್ರಶಸ್ತಿ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪೆರಾಜೆ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಚಿನ್ ಮತ್ತು ರಕ್ಷಾ ಕುತ್ತಿಮುಂಡ ಹಾಗೂ ಕುಂಬಳಚೇರಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ಕಲ್ಪನಾ ಪಿ.ಡಿ. ರವರನ್ನು ಗೌರವಿಸಲಾಯಿತು.