‘ಎಂ.ಎಲ್.ಎ. ಗೆ ತಾಕತ್ತಿಲ್ಲ’ ಪದ ಬಳಕೆಗೆ ಆಡಳಿತ ಸದಸ್ಯರ ಆಕ್ಷೇಪ
ನ.ಪಂ. ಸಭೆಯಲ್ಲಿ ಗಂಭೀರ ಚರ್ಚೆ – ವಾಗ್ವಾದ
ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುಧಾನ ತರಿಸುವ ಕುರಿತು ನಡೆದ ಚರ್ಚೆಯಲ್ಲಿ ತಾಕತ್ ಕುರಿತು ಮಾತು ಪ್ರಸ್ತಾಪವಾಗಿ ಈ ಮಾತಿಗೆ ಆಡಳಿತ ಪರ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿ ಗಂಭೀರ ಚರ್ಚೆ ನಡೆದ ಪ್ರಸಂಗವೂ ನಡೆಯಿತು.
ಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ರವರು ಪುತ್ತೂರಿನ ಶಾಸಕರು ಒಳ್ಳೆಯ ಅನುಧಾನ ತರಿಸುತ್ತಾರೆ. ನಮ್ಮ ಶಾಸಕರಿಂದ ಏಕೆ ಆಗುತ್ತಿಲ್ಲ. ಅವರಿಗೆ ತಾಕತ್ ಇಲ್ಲವಾ ಎಂದು ಕೇಳಿದರು.
ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯರಾದ ವಿನಯ್ ಕುಮಾರ್ ಕಂದಡ್ಕರವರು ಈ ಮಾತು ಸರಿ ಯಲ್ಲ. ನಮ್ಮ ಶಾಸಕರ ತಾಕತ್ ಬಗ್ಗೆ ಕೇಳಲು ನೀವು ಯಾರು? ಕೂಡಲೇ ಈ ಮಾತನ್ನು ಹಿಂಪಡೆಯ ಬೇಕೆಂದು ಪಟ್ಟು ಹಿಡಿದರು.
ಇದಕ್ಕೆ ಪೂರಕವಾಗಿ ಬಿ ಜೆ ಪಿ ಯ ಎಲ್ಲಾ ಸದಸ್ಯರುಗಳು ಮತ್ತು ಅಧ್ಯಕ್ಷರು ನಾಮ ನಿರ್ದೇಶಕ ಸದಸ್ಯರ ಮಾತಿಗೆ ಖಂಡನೆ ವ್ಯಕ್ತ ಪಡಿಸಿದರು.
ಬಳಿಕ ಸದಸ್ಯರಾದ ಉಮ್ಮರ್ ಕೆ ಎಸ್, ವೆಂಕಪ್ಪ ಗೌಡ,ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು.