ಜಾಲ್ಸೂರು: ಲೋ ಬಿಪಿ ಹಿನ್ನೆಲೆ ಅಸೌಖ್ಯಕ್ಕೊಳಗಾಗಿ ಮಹಿಳೆ ಮೃತ್ಯು

0


ಲೋ ಬಿಪಿ ಹಿನ್ನೆಲೆಯಲ್ಲಿ ದಿಢೀರನೆ ಅಸೌಖ್ಯಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಾಲ್ಸೂರು ಗ್ರಾಮದ ಬೇರ್ಪಡ್ಕದಲ್ಲಿ ನ.13ರಂದು ಮಧ್ಯಾಹ್ನ ಸಂಭವಿಸಿದೆ.

ಬೇರ್ಪಡ್ಕದ ಬಾಲಕೃಷ್ಣ ನಾಯ್ಕ ಅವರ ಪತ್ನಿ ಶ್ರೀಮತಿ ಗೀತ ಅವರು ಮೃತಪಟ್ಟ ಮಹಿಳೆಯಾಗಿದ್ದು, ಅವರು ಸಮೀಪದ ಮನೆಯೊಂದಕ್ಕೆ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ದಿಢೀರನೆ ಅಸೌಖ್ಯಕ್ಕೊಳಗಾಗಿ, ತಮ್ಮ ಮನೆಗೆ ಮಧ್ಯಾಹ್ನ ಬಂದಿದ್ದರು. ಆದರೆ ಮನೆಯಲ್ಲಿ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಲೋ ಬಿಪಿಯಿಂದಾಗಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿರುವುದಾಗಿ ತಿಳಿದುಬಂದಿದೆ.
ಅವರಿಗೆ 55 ವರ್ಷ ವಯಸ್ಸಾಗಿತ್ತು.


ಮೃತರು ಪತಿ, ಪುತ್ರ ಪ್ರವೀಣ,ಪುತ್ರಿಯರಾದ ಶ್ಯಾಮಲಾ, ಸೌಮ್ಯ, ಸುಮಿತ್ರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.