ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಬೆಳ್ಳಾರೆ ವಲಯದ 350ನೇ ನೂತನ ಸ್ವಸಹಾಯ ಸಂಘವನ್ನು ಐವರನಾಡು ಕಾರ್ಯಕ್ಷೇತ್ರದಲ್ಲಿ ನ. 29ರಂದು ಉದ್ಘಾಟಿಸಲಾಯಿತು. ಹೊಸ ಸ್ವಸಹಾಯ ಸಂಘ “ನೇಸರ” ವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಲಿಂಗಂ ಬೆಂಗಮಲೆ ಉದ್ಘಾಟಿಸಿದರೆ, ಯೋಜನಾಧಿಕಾರಿ ಮಾಧವರು ಸ್ವಸಹಾಯ ಸಂಘದ ನಿಯಮವಳಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರ ಮಾಡಿದರು.
ವಲಯಾಧ್ಯಕ್ಷರಾದ ವೇದ ಹೆಚ್ ಶೆಟ್ಟಿ ವಲಯದ ಮೇಲ್ವಿಚಾರಕಿ ವಿಶಾಲ ಕೆ, ಸೇವಾಪ್ರತಿನಿಧಿ ರಶ್ಮಿತಾ, ಸ್ವಸಹಾಯ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.