ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭ ಪ್ರಯುಕ್ತ ಗಲ್ಫ್ ಮೀಟ್

0

ಕಾರ್ಯಕ್ರಮಕ್ಕೆಂದೇ ಗಲ್ಫ್ ರಾಷ್ಟ್ರಗಳಿಂದ ಬಂದ ನೂರಕ್ಕೂ ಹೆಚ್ಚು ಎ ಜಿ ಸಿ ಸಿ ಸದಸ್ಯರುಗಳು

ಸಯ್ಯದ್ ಮಶೂದ್ ಅಲ್ ಬುಖಾರಿ ಕೂರತ್ ತಂಗಳ್ ರವರಿಂದ ಸಭಾ ಕಾರ್ಯಕ್ರಮ ಉದ್ಘಾಟನೆ

ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭ ಪ್ರಯುಕ್ತ ಬೃಹತ್ ಗಲ್ಫ್ ಮೀಟ್ ಕಾರ್ಯಕ್ರಮ ಎ ಜಿ ಸಿ ಸಿ ಸಭಾಂಗಣದಲ್ಲಿ ನಡೆಯಿತು.

ಅಸ್ಸಯ್ಯದ್ ಮಶೂದ್ ಅಲ್ ಬುಖಾರಿ ಕೂರತ್ ತಂಗಳ್ ದು:ಆ ಮೂಲಕ ಗಲ್ಫ್ ಮೀಟ್ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ‘ಪರಮಾತ್ಮನು ಮನುಷ್ಯರಿಗೆ ನೀಡಿದ ಸಂಪತ್ತಿನ ಕೆಲವು ಭಾಗವನ್ನು ಬಡವರಿಗೆ, ನಿರ್ಗತಿಕರಿಗೆ,ಅನಾಥರಿಗೆ ನೀಡುವುದು ಇಸ್ಲಾಮಿನಲ್ಲಿ ನಮ್ಮ ಕರ್ತವ್ಯವಾಗಿದೆ. ಈ ಒಂದು ಕಾರ್ಯವನ್ನು ಈ ಸಂಸ್ಥೆಯ ಮುಖಂಡರು ಮತ್ತು ಊರಿನವರು ಮಾಡಿದ್ದಾರೆ ಎಂಬುವುದು ಶ್ಲಾಘನೀಯ ಎಂದು ಶುಭಾರೈಸಿದರು.

ಗಲ್ಫ್ ಮೀಟ್ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ನೂರಕ್ಕೂ ಹೆಚ್ಚು ಗಲ್ಫ್ ಸಮಿತಿಯ ಸದಸ್ಯರುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ವಿ ನೀಡಿದರು.

ಸಮಾರಂದಲ್ಲಿ ಈ ಮೊದಲು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸಿ ಇದೀಗ ಊರಿನಲ್ಲಿರುವ ನೂರಾರು ಅನಿವಾಸಿ ಭಾರತೀಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು AGCC ಉಪಾಧ್ಯಕ್ಷ ಮುನೀರ್ ಜಟ್ಟಿಪಳ ವಹಿಸಿದರು, ಅಡ್ವಕೆಟ್ ಅಬ್ದುಲ್ಲಾ ಹಿಮಮಿ ಸಖಾಫಿ ಸರ್ವರನ್ನು ಸ್ವಾಗತಿಸಿದರು, ದಮಾಮ್ ಸಮಿತಿ ಅಧ್ಯಕ್ಷ ಎಂ ಬಿ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅನೇಕ ವರ್ಷಗಳ ನಮ್ಮ ಕನಸಾಗಿದ್ದ ಈ ಆಡಿಟೋರಿಯಂ ಉದ್ಘಾಟನಾ ಸಮಾರಂಭದ ಸಂಭ್ರಮ, ಸಂತೋಷ, ಸಂತೃಪ್ತಿ ತಂದಿದೆ. ಆಡಿಟೋರಿಯಂ ಅನಿವಾಸಿ ಪ್ರವಾಸಿಗರಿಗೆ ಶಾಶ್ವತ ಪ್ರತಿಫಲ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ವೇದಿಕೆಯಲ್ಲಿ ಸಯ್ಯದ್ ಮುಹ್ಸಿನ್ ಸೈದಲವಿ ತಂಙಳ್,ಸ್ವಲಾಹುದ್ದೀನ್ ಸಖಾಫಿ, ನಸೀಹ್ ದಾರಿಮಿ ಬೆಳ್ಳಾರೆ, ಅಬ್ದುಲ್ ಖಾದರ್ ಹಾಜಿ ಪಟೇಲ್, ಬಹರೈನ್ ಕಮಿಟಿ ಅಧ್ಯಕ್ಷ ಸಿದ್ದೀಕ್,ಯುಎಇ ಸಮಿತಿ ಸಾರಥಿ ಲತೀಫ್ ನ್ಯಾಶನಲ್, ಉಮ್ಮರ್ ಬೀಜದಕಟ್ಟೆ,ಟಿ ಎಂ ಶಹೀದ್ ತೆಕ್ಕಿಲ್,ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್ಸ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಗಲ್ಫ್ ಸಮಿತಿ ಮುಖಂಡರುಗಳಾದ ಸಂಶುದ್ದೀನ್ ದಮಾಮ್, ಸಿದ್ದಿಕ್ ಓಲ್ಡ್ ಗೇಟ್, ಸಲೀಮ್ ಪ್ರಿಯಾ ರಿಯಾದ್,ಆಶ್ರಫ್ ಮರಸಂಕ, ಯೂಸುಫ್ ಸಅದಿ ದಮಾಮ್, ಇಬ್ರಾಹಿಂ ನಡುಬೈಲು, ಎಸ್ ಎಂ ಅಬ್ದುಲ್ ರಹಿಮಾನ್,ಲತೀಫ್ ನ್ಯಾಷನಲ್, ಅಶ್ರಫ್ ಫ್ಯಾನ್ಸಿ, ಲತೀಫ್ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಡಾ.ಅಬ್ದುರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮುಖ್ಯ ಭಾಷಣ ಮಾಡಿದರು.
ಎಜಿಸಿಸಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ’ ಅನಿವಾಸಿ ಭಾರತೀಯರ ಪ್ರತಿಯೊಬ್ಬರ ಶ್ರಮದ ಫಲವಾಗಿ ಸುಂದರ ಅಡಿಟೀರಿಯಂ ನಿರ್ಮಾಣ ಆಗಿದೆ, ಇದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ನಸೀಹ್ ದಾರಿಮಿ ಬೆಳ್ಳಾರೆ, ಮುನೀರ್ ಸಾ-ಆದಿ ಅಲ್ ಅರ್ಷದಿ ಜಾಲ್ಸೂರ್ ಅಡ್ಕಾರ್, ಯೂಸುಫ್ ಸ-ಆದಿ ಅಯ್ಯಂಗೇರಿ, ಉಮ್ಮರ್ ಮುಸ್ಲಿಯಾರ್ ಮರ್ದಾಳ,
ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅನ್ಸಾರಿಯಾ ಗಲ್ಪ್ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಕೋಶಾಧಿಕಾರಿ ಹಾಜಿ ಎಸ್.ಎಂ ಅಬ್ದುಲ್ ಹಮೀದ್,
ಗಲ್ಫ್ ಸಮಿತಿ ಪ್ರತಿನಿಧಿಗಳಾದ
ಕಮಾಲ್ ಅಜ್ಜಾವರ, ಟಿ.ಎಂ.ಶಹೀದ್ ತೆಕ್ಕಿಲ್, ಉಮ್ಮರ್ ಬೀಜದಕಟ್ಟೆ, ಆದಂ ಹಾಜಿ ಕಮ್ಮಾಡಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಬ್ದುಲ್ಲ ಹಿಮಮಿ ಸಖಾಫಿ ಸ್ವಾಗತಿಸಿ ಅನ್ಸಾರಿಯಾ ಕಾರ್ಯದರ್ಶಿ
ಶರೀಫ್ ಜಟ್ಟಿಪಳ್ಳ ವಂದಿಸಿದರು. ಎ.ಬಿ.ಕಮಾಲ್, ಇಕ್ಬಾಲ್ ಕನಕಮಜಲು ಕಾರ್ಯಕ್ರಮ ನಿರೂಪಿಸಿದರು.